ಊಟಿಯಲ್ಲಿ 6 ಎಕರೆ ಖರೀದಿಸಿದ ಚಿರಂಜೀವಿ; ಬೆಲೆ ಎಷ್ಟು?


ಊಟಿಯ ಗುಡ್ಡ ಪ್ರದೇಶದಲ್ಲಿ ಚಿರಂಜೀವಿ ಈ ಜಾಗವನ್ನು ಖರೀದಿ ಮಾಡಿದ್ದಾರೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಅವರು 16 ಕೋಟಿ ರೂಪಾಯಿ ಹಣವನ್ನು ಈ ಜಾಗಕ್ಕೆ ನೀಡಿದ್ದಾರೆ. ಅಂದರೆ ಪ್ರತಿ ಎಕರೆಗೆ ಅವರು 2.6 ಕೋಟಿ ರೂಪಾಯಿ ಕೊಟ್ಟಿದ್ದಾರೆ.

ಊಟಿಯಲ್ಲಿ 6 ಎಕರೆ ಖರೀದಿಸಿದ ಚಿರಂಜೀವಿ; ಬೆಲೆ ಎಷ್ಟು?

ಚಿರಂಜೀವಿ

ಮೆಗಾಸ್ಟಾರ್ ಚಿರಂಜೀವಿ ಅವರು ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅನೇಕ ಸಕ್ಸಸ್ ಸಿನಿಮಾಗಳನ್ನು ಅವರು ನೀಡಿದ್ದಾರೆ. ಈ ಕಾರಣದಿಂದಲೇ ಅವರಿಗೆ ಹಣದ ಹೊಳೆ ಹರಿದು ಬಂದಿದೆ. ಅವರು ನೂರಾರು ಕೋಟಿ ರೂಪಾಯಿ ಒಡೆಯ. ಖಾಸಗಿ ಜೆಟ್ ಕೂಡ ಅವರ ಬಳಿ ಇದೆ. ಈಗ ಅವರು ಊಟಿಯಲ್ಲಿ ಆರು ಎಕರೆ ಜಾಗ ಖರೀದಿಸಿ ಮಾಡಿದ್ದಾರೆ ಎಂದು ವರದಿ ಆಗಿದೆ. ಇದರ ಬೆಲೆ ಕೇಳಿ ಅನೇಕರಿಗೆ ಅಚ್ಚರಿ ಆಗಿದೆ.

ಚಿರಂಜೀವಿ ಅವರು ಹೈದರಾಬಾದ್​ನಲ್ಲಿ ಮನೆ ಹೊಂದಿದ್ದಾರೆ. ತೆಲುಗು ರಾಜ್ಯಗಳಲ್ಲಿ ಅವರು ಸಾಕಷ್ಟು ಪ್ರಾಪರ್ಟಿ ಹೊಂದಿದ್ದಾರೆ. ಅದೇ ರೀತಿ ಬೆಂಗಳೂರಿನ ಹೊರ ವಲಯದಲ್ಲಿ ಫಾರ್ಮ್​ಹೌಸ್ ಹೊಂದಿದ್ದಾರೆ. ಅವರು ಸಮಯ ಕಳೆಯೋಕೆ ಆಗಾಗ ಇಲ್ಲಿಗೆ ಆಗಮಿಸುತ್ತಾರೆ. ಅವರು ಈ ವರ್ಷ ಕೆಲವು ಹಬ್ಬಗಳನ್ನು ಇಲ್ಲಿಯೇ ಆಚರಿಸಿದ್ದರು. ಈಗ ಚಿರಂಜೀವಿ ಅವರು ಊಟಿಯಲ್ಲಿ ಜಾಗ ಖರೀದಿ ಮಾಡಿದ್ದಾರೆ. ತಮಿಳಿನಾಡಿನಲ್ಲಿರೋ ಈ ಬೆಟ್ಟ ಪ್ರದೇಶದಲ್ಲಿ ಅವರು ಪ್ರಾಪರ್ಟಿ ಪರಿಚಯಿಸಿದ್ದಾರೆ.

ಊಟಿಯ ಗುಡ್ಡ ಪ್ರದೇಶದಲ್ಲಿ ಚಿರಂಜೀವಿ ಈ ಜಾಗವನ್ನು ಖರೀದಿ ಮಾಡಿದ್ದಾರೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಕೂಡ ಪೂರ್ಣಗೊಂಡಿದೆ. ಅವರು 16 ಕೋಟಿ ರೂಪಾಯಿ ಹಣವನ್ನು ಈ ಜಾಗಕ್ಕೆ ನೀಡಿದ್ದಾರೆ. ಅಂದರೆ ಪ್ರತಿ ಎಕರೆಗೆ ಅವರು 2.6 ಕೋಟಿ ರೂಪಾಯಿ ಕೊಟ್ಟಿದ್ದಾರೆ.

https://90448716bca6f3d7ccf93652a2d76576.safeframe.googlesyndication.com/safeframe/1-0-40/html/container.html

ಚಿರಂಜೀವಿ ಈ ಜಾಗ ಖರೀದಿ ಮಾಡಿದಕ್ಕೂ ಒಂದು ಕಾರಣ ಇದೆ. ಅವರು ಇಲ್ಲಿ ಫಾರ್ಮ್​ಹೌಸ್ ಕಟ್ಟೋ ಆಲೋಚನೆಯಲ್ಲಿ ಇದ್ದಾರೆ. ರಾಮ್ ಚರಣ್ ಹಾಗೂ ಅವರ ಪತ್ನಿ ಉಪಾಸನಾ ಈಗಾಗಲೇ ಇಲ್ಲಿಗೆ ತೆರಳಿ ಒಂದಷ್ಟು ಐಡಿಯಾಗಳನ್ನು ನೀಡಿದ್ದಾರೆ.

ಇದನ್ನೂ ಓದಿ: ಚಿರಂಜೀವಿ ಬೆಂಗಳೂರಿನಲ್ಲಿ ಹೊಂದಿರೋ ಫಾರ್ಮ್​ಹೌಸ್ ಬೆಲೆ ಎಷ್ಟು?

ಚಿರಂಜೀವಿ ಅವರಿಗೆ ಇತ್ತೀಚೆಗೆ ದೊಡ್ಡ ಗೆಲುವು ಸಿಕ್ಕಿಲ್ಲ. ಅವರು ‘ವಿಶ್ವಾಂಬರಂ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರವನ್ನು ವಸಿಷ್ಟ ಅವರ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ರಿಲೀಸ್​ಗಾಗಿ ಫ್ಯಾನ್ಸ್​ಗಾಗಿ ಕಾದಿದ್ದಾರೆ.


Leave a Comment

Your email address will not be published. Required fields are marked *