ಬಾದಾಮಿ ಸುದ್ದಿ
24/07/2024
ಪ್ರಸವ ಪೂರ್ವಲಿಂಗ ಪತ್ತೆ ಪ್ರಕರಣ,ಬಾಗಲಕೋಟೆ ಜಿಲ್ಲೆಗಳ ಖಾಸಗಿ ಆಸ್ಪತ್ರೆ ಮೇಲೆ ಕೇಂದ್ರ ತಂಡ ದಿಡೀರ್ ದಾಳಿ.
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಸವ ಪೂರ್ವ ಬ್ರೂನ ಲಿಂಗ ಪತ್ತೆ, ಬ್ರೂಣ ಹತ್ಯೆ ದಂಧೆ ಪತ್ತೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಆರೋಗ್ಯ ಇಲಾಖೆ ತಂಡದಿಂದ 2 ಆಸ್ಪತ್ರೆಗಳ ಮೇಲೆ ಮಂಗಳವಾರ ದಾಳಿ ನಡೆದಿದೆ.
ಹೊಸದಿಲ್ಲಿಯಿಂದ ಆರೋಗ್ಯ ಅಧಿಕಾರಿಗಳ ತಂಡ P. C. P. N. D. T ಕಾಯ್ದೆ ಅನುಷ್ಠಾನ ಅಧಿಕಾರಿಗಳ ತಂಡದ ಸಾರತ್ಯದಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ ಇದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿಯ ತಾಲೂಕಾ ಆಸ್ಪತ್ರೆಯ ವೈದ್ಯೆ ಡಾ! ಕವಿತಾ ಶಿವನಾಯ್ಕರ್ ಅವರ ಖಾಸಗಿ ಆಸ್ಪತ್ರೆ ಟಿಪ್ಪು ನಗರದಲ್ಲಿರುವ ಶ್ರೀ ರೇಣುಕಾ ಆಸ್ಪತ್ರೆ ಹಾಗೂ ಜಿಲ್ಲೆಯ ಮಹಾಲಿಂಗಪುರದ ಡಾ!! ಆಶಾ ಮಲಘಾಣ ಅವರ ಆಸ್ಪತ್ರೆಗಳಲ್ಲಿ ತನಿಖೆ ನಡೆದಿದ್ದು ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ಸುಳಿವು ಮಾಹಿತಿ ನೀಡದೇ ಕೇಂದ್ರದ ಆರೋಗ್ಯ ಅಧಿಕಾರಿಗಳ ತಂಡ ಏಕಾಏಕಿ ದಾಳಿ ನಡೆಸಿದ್ದು ಎರಡೂ ಆಸ್ಪತ್ರೆಗಳ ಸ್ಕ್ಯಾನಿಂಗ್ ಮಷಿನಗಳನ್ನು ವಶಪಡಿಸಿಕೊಂಡು ಸ್ಕ್ಯಾನಿಂಗ್ ಮಷಿನ್ ಕೋಣೆಗಳನ್ನು ಸೀಜ್ ಮಾಡಲಾಗಿದೆ.
ಈ ದಾಳಿ ಬಗ್ಗೆ ದೂರು ದಾಖಲಿಸುವ ಸಾಧ್ಯತೆಯಿದೆ ಎಂದು ಜಿಲ್ಲಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ಕೂಡಾ ಬಂದಿದೆ.
ವರದಿ:- ಕೆ. ಎಚ್. ಶಾಂತಗೇರಿ ಸಾಮ್ರಾಟ್ ಟಿವಿ ಬಾದಾಮಿ.






