ಗದಗ: ತಂಗಿಯನ್ನು ಪ್ರೀತಿಸಿದ ಎಂದು ಯುವಕನಿಗೆ ಚಾಕು ಇರಿದ ಅಣ್ಣ, ಸಾವು ಬದುಕಿನ ನಡುವೆ ಯುವಕನ ಹೋರಾಟ


ತನ್ನ ತಂಗಿಯನ್ನಿ ಪ್ರೀತಿಸುತ್ತಿದ್ದಾನೆ ಎಂಬ ಒಂದೇ ಒಂದು ಕಾರಣಕ್ಕೆ ಧಾರವಾಡ ಮೂಲದ ಜಾಫರ್ ಜಮಾದಾರ ಎಂಬ 25 ವರ್ಷದ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಚಾಕುವಿನಿಂದ ಇರಿಯಲಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಜಾಫರ್ ನನ್ನು ತಕ್ಷಣ ಜಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಸಾವು ಬದುಕಿನ ಮಧ್ಯ ಹೋರಾಟ ನಡೆಸ್ತಿದ್ದಾರೆ.

ಗದಗ: ತಂಗಿಯನ್ನು ಪ್ರೀತಿಸಿದ ಎಂದು ಯುವಕನಿಗೆ ಚಾಕು ಇರಿದ ಅಣ್ಣ, ಸಾವು ಬದುಕಿನ ನಡುವೆ ಯುವಕನ ಹೋರಾಟ

ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ

ಗದಗ, ಅ.08: ತಂಗಿಯ ಜೊತೆ ಪ್ರೀತಿ (Love) ಮಾಡಿದ್ದಕ್ಕೆ ರೊಚ್ಚಿಗೆದ್ದ ಅಣ್ಣ ಪ್ರೀತಿ ಮಾಡಿದ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ (Attempted Murder) ಘಟನೆ ಗದಗ ನಗರದ ಧೋಬಿ ಘಾಟ್ ಬಳಿ ಅಕ್ಟೋಬರ್ 6 ರಂದು ತಡ ರಾತ್ರಿ ನಡೆದಿದೆ. ಧಾರವಾಡ ಮೂಲದ ಜಾಫರ್ ಜಮಾದಾರ ಎಂಬ 25 ವರ್ಷದ ಯುವಕನನ್ನು ಹಿಗ್ಗಾಮುಗ್ಗಾ ಥಳಿಸಿ ಚಾಕುವಿನಿಂದ ಇರಿಯಲಾಗಿತ್ತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಜಾಫರ್ ನನ್ನು ತಕ್ಷಣ ಜಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಸಾವು ಬದುಕಿನ ಮಧ್ಯ ಹೋರಾಟ ನಡೆಸ್ತಿದ್ದಾರೆ.

ತೀವ್ರವಾಗಿ ಗಾಯಗೊಂಡ ಜಾಫರ್ ನನ್ನು ರಾತ್ರೋರಾತ್ರಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಕಿಮ್ಸ್ ನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ರುಹಾನ್ ಎಂಬ ಯುವಕನ ತಂಗಿಯನ್ನು ಜಾಫರ್ ಪ್ರೀತಿ ಮಾಡಿದ್ದ. ಈ ವಿಚಾರ ತಿಳಿಯುತ್ತಿದ್ದಂತೆ ಕರೆಸಿ ಬುದ್ಧಿ ಹೇಳಲಾಗಿತ್ತು. ವಾರ್ನಿಂಗ್ ಕೊಟ್ಟಿದ್ದರು ಜಾಫರ್ ಪ್ರೀತಿ ಕಡಿಮೆಯಾಗಿರಲಿಲ್ಲ. ಪ್ರೇಮ ಮುಂದುವರೆದಿತ್ತು. ಇದರಿಂದ ರೊಚ್ಚಿಗೆದ್ದ ರುಹಾನ್ ತನ್ನ ತಂಗಿಯ ಪ್ರಿಯತಮನಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

ಮೊದಲಿಗೆ ಅಕ್ಟೋಬರ್ 6 ರಂದು ರಾತ್ರಿ ಟೀ ಸ್ಟಾಲ್ ಬಳಿ ನಿಂತಿದ್ದ ಜಾಫರ್ ಜೊತೆ ರುಹಾನ್​ಗೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ರುಹಾನ್ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದಾನೆ. ಆರೋಪಿ ರುಹಾನ್ ಹಾಗೂ ದಾದಾಪೀರ್ ಸೇರಿ ಕೊಲೆಗೆ ಯತ್ನಿಸಿದ್ದಾರೆ. ಪ್ರಮುಖ ಆರೋಪಿ ರುಹಾನ್ ಎಸ್ಕೇಪ್ ಆಗಿದ್ದು, 2ನೇ ಆರೋಪಿ ದಾದಾಪೀರ್​ನನ್ನು ಶಹರ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಯಾದಗಿರಿ ಜಿಲ್ಲೆಯಾದ್ಯಂತ ನಿರಂತರ ಮಳೆ; ಹಾಳಾಯ್ತು ಬಂಗಾರದಂತ ತೊಗರಿ ಬೆಳೆ

ಮಾತುಕತೆಗೆ ಹೋದ ವ್ಯಕ್ತಿ ಶವವಾಗಿ ಪತ್ತೆ

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೆಬ್ಬೆಪುರ ಗ್ರಾಮದಲ್ಲಿ ಕೊಲೆ ನಡೆದಿದೆ. ಗ್ರಾಮದ ನಂಜುಂಡಸ್ವಾಮಿ (45) ಎಂಬುವವರು ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿಕುಟುಂಬಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆ ಹಿನ್ನಲೆ ದೇವರಸನಹಳ್ಳಿಗೆ ನಂಜುಂಡಸ್ವಾಮಿ ತೆರಳಿದ್ದರು. ಪತ್ನಿಯನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಮಾತುಕತೆಗೆ ಬಂದಿದ್ದರು. ಆದರೆ ನಂಜುಂಡಸ್ವಾಮಿ ಮೃತದೇಹ ಬೆಳಿಗ್ಗೆ ಗದ್ದೆಯಲ್ಲಿ ಪತ್ತೆಯಾಗಿದೆ. ಆಸ್ಪತ್ರೆಗೆ ಸೇರಿಸುವ ಹೊತ್ತಿಗೆ ಸಾವು ಸಂಭವಿಸಿದೆ.

ಹೊಡೆದು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಕೊಲೆ ಕೇಸ್ ದಾಖಲಿಸಿ ಆರೋಪಿ ಬಂಧಿಸಿ ಎಂದು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ. ಘಟನೆ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Leave a Comment

Your email address will not be published. Required fields are marked *