ಡಾ.ಸೋನಾಲಿ ಸರ್ನೋಬತ್ ಗೆ ಮಹಾರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿ


ಖ್ಯಾತ ವೈದ್ಯೆ, ಸಾಮಾಜಿಕ ಕಾರ್ಯಕರ್ತೆ, ಕರ್ನಾಟಕ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಡಾ. ಸೋನಾಲಿ ಸರ್ನೋಬತ್ ಅವರಿಗೆ ಪ್ರತಿಷ್ಠಿತ ವುಮನ್ ಆಫ್ ಇಂಪ್ಯಾಕ್ಟ್ ಪ್ರಶಸ್ತಿ ಲಭಿಸಿದೆ.

    ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಮಂಗಳವಾರ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.

    ಸಮಾಜ ಸೇವೆ ವಿಭಾಗದಲ್ಲಿ ಅವರನ್ನು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

    ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಹಿರಿಯ ನಟಿ ಸ್ಮಿತಾ ಜಯಕರ್, ಲಗು ಬಂಧು ಜ್ಯುವೆಲ್ಲರ್ಸ್‌ನ ಅಧ್ಯಕ್ಷರಾದ ಶ್ರೀ ದಿಲೀಪ್ ಲಾಗು ಮತ್ತು ಪ್ರೀಮಿಯಂ ಬ್ರ್ಯಾಂಡ್ ಬ್ಯಾಗಿಟ್‌ನ ಮಾಲೀಕರಾದ ಶ್ರೀಮತಿ ನೀನಾ ಲೇಖಿ ಮತ್ತು ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ರಚನಾ ಬಾಗಾವೆ ಉಪಸ್ಥಿತರಿದ್ದರು.

    ಸಮಾರಂಭದ ಗೌರವ ಅತಿಥಿಗಳಾಗಿ,
    ನ್ಯಾರಿಯೊನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
    ಆಶಿಶ್‌ಕುಮಾರ್ ಚೌಹಾಣ್,
    ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಅದಿತಿ ತತ್ಕರೆ ,ನಿರ್ದೇಶಕಿ ನೀನಾ ಲೇಖಿ ಆಗಮಿಸಿದ್ದರು.

    ಈ ಸಂದರ್ಭದಲ್ಲಿ ಮಾತನಾಡಿದ
    ಡಾ ಸೋನಾಲಿ ಸರನೋಬತ್, ತಮ್ಮ ಸಮಾಜ ಸೇವೆಯ ಮಾಹಿತಿ ನೀಡಿ, ಇದಕ್ಕೆ ಕುಟುಂಬದ ಸಹಕಾರವನ್ನು ಸ್ಮರಿಸಿದರು.

    ಪತಿ ಡಾ ಸಮೀರ್ ಸರ್ನೋಬತ್ ಮತ್ತು ಮಗ ಡಾ ಶ್ರೀಜ್ಯೋತ್ ಸರ್ನೋಬತ್ ಜೊತೆಗಿದ್ದರು.

    ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪುರಸ್ಕೃತರ ವಿವರ:

    1. ಡಾ. ಅಪೂರ್ವ ಪಾಲ್ಕರ್ – ಉಪಕುಲಪತಿ – ಮಹಾರಾಷ್ಟ್ರ ರಾಜ್ಯ ಕೌಶಲ್ಯ ವಿಶ್ವವಿದ್ಯಾಲಯ
    2. ಹರ್ಷದಾ ಸಾವಂತ್ – ಹಿರಿಯ ಸಂಪಾದಕ – ಸಿಎನ್ ಬಿಸಿ ಆವಾಜ್
    3. ಡಾ. ವಂದನಾ ಫಡ್ಕೆ – ನಿರ್ದೇಶಕರು – ಫಡ್ಕೆ ಪ್ರಯೋಗಾಲಯ
    4. ಪದ್ಮಶ್ರೀ ಭಾಗ್ಯಶ್ರೀ ಟಿಪ್ಸೆ – ಮಹಿಳಾ ಇಂಟರ್ನ್ಯಾಷನಲ್ ಮಾಸ್ಟರ್
    5. ಡಾ. ಸೋನಾಲಿ ಸರನೋರತ್ – ಸಮಾಜ ಸೇವೆ
    6. ನಟಿ ಸ್ಮಿತಾ ಜಯಕರ್ – ಜೀವಮಾನ ಸಾಧನೆ ಪ್ರಶಸ್ತಿ
    7. ಮೇಘನಾ -ಅಡುಗೆ – ಆಹಾರ ವಿಭಾಗ.
    8. ವೈದೇಹಿ ಪರಶುರಾಮಿ- ಮರಾಠಿ ನಟಿ


    Leave a Comment

    Your email address will not be published. Required fields are marked *