ತಿರಂಗಾ ಯಾತ್ರೆ — ಚನ್ನಮ್ಮನ ಕಿತ್ತೂರಿನಲ್ಲಿ ರಾಷ್ಟ್ರ ಭಕ್ತಿಗೆ ನಮನ


ಚನ್ನಮ್ಮನ ಕಿತ್ತೂರು: ಇತ್ತೀಚೆಗೆ ನಡೆದ ಆಪರೇಶನ್ ಸಿಂಧೂರ ಯಸಶ್ವಿಯಾದ ಹಿನ್ನಲೆಯಲ್ಲಿ   ಕಿತ್ತೂರು ರಾಣಿ ಚನ್ನಮ್ಮ  ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ (ರಿ) ಹಾಗೂ ಕಿತ್ತೂರು ಪಟ್ಟಣದ ನಾಗರಿಕರ   ಸಹಯೋಗದಲ್ಲಿ ಭಾರತದ ಸೈನಿಕರಿಗೂ ರಾಷ್ಟ್ರರಕ್ಷಣೆಗೆ ನಮನ ಸಲ್ಲಿಸಲು “ತಿರಂಗಾ ಯಾತ್ರೆ”ಯನ್ನು ಆಯೋಜಿಸಲಾಗಿದೆ.

ಈ ಯಾತ್ರೆಯು 2025ರ ಮೇ 20 ರಂದು ಮಂಗಳವಾರ ಬೆಳಿಗ್ಗೆ 9:30ಕ್ಕೆ ಕಿತ್ತೂರು ರಾಣಿ ಚನ್ನಮ್ಮನವರ ಕೋಟೆಯಿಂದ ಪ್ರಾರಂಭವಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಚನ್ನಮ್ಮನವರ ವರ್ತುಳದ ವರೆಗೆ ಸಾಗಲಿದೆ. ಚನ್ನಮ್ಮನ ಕಿತ್ತೂರಿನಲ್ಲಿ ನಡೆಯುವ ಈ ವಿಶಿಷ್ಟ ಯಾತ್ರೆಯು ರಾಷ್ಟ್ರ ಭಕ್ತಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಶ್ರದ್ಧೆಯಿಂದ ನಡೆಸಲಾಗುತ್ತದೆ.

ಸೈನಿಕರ ಗೌರವ, ದೇಶಭಕ್ತಿಯ ಪ್ರೇರಣೆ, ಮತ್ತು ಯುವ ಪೀಳಿಗೆಗೆ ರಾಷ್ಟ್ರಸೇವೆ ಹಾಗೂ ರಾಷ್ಟ್ರಭಕ್ತಿಯ ಪ್ರೇರಣೆಯಾಗಿ ತಿರಂಗಾ ಯಾತ್ರೆ ಮಹತ್ವದ ಪಾತ್ರ ವಹಿಸಲಿದೆ. 

ಪಟ್ಟಣದ ನಾಗರಿಕರು, ಶಾಲಾ ಕಾಲೇಜು  ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸುತ್ತಮುತ್ತಲಿರು ಗ್ರಾಮಗಳ ಗ್ರಾಮಸ್ಥರು ಸೇರಿದಂತೆ ಇತರರು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದು  ರಾಣಿ ಚನ್ನಮ್ಮ  ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ ಎಸ್ ಪಿ ಹಿರೇಮಠ  ತಿಳಿಸಿದ್ದಾರೆ.


Leave a Comment

Your email address will not be published. Required fields are marked *