
ಧಾರವಾಡ: ಕರ್ನಾಟಕ ವಿದ್ಯಾವರ್ಧಕಸಂಘದ ಚುನಾವಣಿಗೆ ಭಾನುವಾರ 17 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಮೋಹನ ಲಿಂಬಿಕಾಯಿ,ನಿಂಗಣ್ಣ ಕುಂಟಿ, ಉಪಾಧ್ಯಕ್ಷ ಸ್ಥಾನಕ್ಕೆ ಶರಣಪ್ಪ, ಕೂಟಗಿ, ಕಾರ್ಯಾಧ್ಯಕ್ಷ ಸ್ಥಾನಕ್ಕೆ ಮನೋಜಕುಮಾರ ಪಾಟೀಲ, ಕೋಶಾಧ್ಯಕ್ಷ ಸ್ಥಾನಕ್ಕೆ ವೀರಣ್ಣ ಯಳಲಿ, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪ್ರಕಾಶ ಉಡಿಕೇರಿ,ಸಹ ಕಾರ್ಯದರ್ಶಿಗೆ ಮಾರ್ತಾಂಡಪ್ಪ ಕತ್ತಿ,ಕಾರ್ಯಕಾರಿ ಸಮಿತಿ ಮಹಿಳಾ ಮೀಸಲು ಸ್ಥಾನಕ್ಕೆ ರತ್ನಾ ಐರಸಂಗ, ಎಸ್ಸಿ, ಎಸ್ಟಿ ಮೀಸಲು ಸ್ಥಾನಕ್ಕೆ ವಿಶ್ವನಾಥ ಚಿಂತಾಮಣಿ, ಸಾಮಾನ್ಯ ಸ್ಥಾನಕ್ಕೆ ಡಾ. ವಿಜಯಕುಮಾರ ಕಮ್ಮಾರ, ವಿಶ್ವನಾಥ ಅಮರಶೆಟ್ಟಿ, ಸಂತೋಷ ಪಟ್ಟಣಶೆಟ್ಟಿ, ಪ್ರಭು ಕುಂದರಗಿ, ಶಿವನಗೌಡ ದಾನಪ್ಪಗೌಡರ, ಪ್ರೊ. ಹರ್ಷ, ರಂಬಳ, ಪ್ರಭು ಹಂಚಿನಾಳ ಹಾಗೂ ಆನಂದ ಏಣಗಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಎಸ್. ನೇಗಿನಹಾಳ ತಿಳಿಸಿದ್ದಾರೆ.




