ಬೆಂಗಳೂರು: ಕೇವಲ 20 ರೂಗಾಗಿ ಬಾರ್​ ಕ್ಯಾಷಿಯರ್​ಗೆ ಚಾಕು ಇರಿದ ಕಿಡಿಗೇಡಿಗಳು


ಬಾರ್ ಕ್ಯಾಷಿಯರ್ 20 ರೂಪಾಯಿ ಹೆಚ್ಚಿಗೆ ಬಿಲ್ ಹಾಕಿದ ಎಂಬ ಕಾರಣಕ್ಕೆ ಚಾಕು, ಬಾಟಲ್​ನಿಂದ ಕ್ಯಾಷಿಯರ್ ರಂಜಿತ್ ಎಂಬಾತನ ಮೇಲೆ ಮೂವರು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು: ಕೇವಲ 20 ರೂಗಾಗಿ ಬಾರ್​ ಕ್ಯಾಷಿಯರ್​ಗೆ ಚಾಕು ಇರಿದ ಕಿಡಿಗೇಡಿಗಳು

ಜಯಶ್ರೀ ಬಾರ್

ಬೆಂಗಳೂರು, ಅ.07: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಕ್ಷುಲ್ಲಕ ಕಾರಣಕ್ಕೆ ಡೆಡ್ಲಿ ಮರ್ಡರ್ ಅಟ್ಯಾಕ್ ನಡೆದಿದೆ. ಕೇವಲ 20ರೂಪಾಯಿಗೆ ಕಿಡಿಗೇಡಿಗಳು ಚಾಕು ಇರಿದಿದ್ದಾರೆ. ವಿದ್ಯಾರಣ್ಯಪುರದ ಬಾರ್​ನಲ್ಲಿ ಘಟನೆ ನಡೆದಿದ್ದು ಬಾರ್ ಕ್ಯಾಷಿಯರ್​ಗೆ ಚಾಕು ಇರಿದ ಸಂಬಂಧ ಇಬ್ಬರನ್ನು ಪೊಲೀಸರು (Vidyaranyapura Police Station) ಬಂಧಿಸಿದ್ದಾರೆ. ಚೇತನ್ ಹಾಗು ಕಾರ್ತಿಕ್ ಬಂಧಿತ ಆರೋಪಿಗಳು. ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.

ವಿದ್ಯಾರಣ್ಯಪುರ ನರಸೀಪುರದ ಜಯಶ್ರೀ ಬಾರ್​ನಲ್ಲಿ ಕುಡಿಯಲು ಬಂದಿದ್ದ ಚೇತನ್, ಕಾರ್ತಿಕ್ ಹಾಗೂ ಮತ್ತೋರ್ವ ವ್ಯಕ್ತಿ ಸೇರಿ ಮೂವರು ಗಲಾಟೆ ಮಾಡಿಕೊಂಡಿದ್ದಾರೆ. ಬಾರ್ ಕ್ಯಾಷಿಯರ್ 20 ರೂಪಾಯಿ ಹೆಚ್ಚಿಗೆ ಬಿಲ್ ಹಾಕಿದ ಎಂಬ ಕಾರಣಕ್ಕೆ ಚಾಕು, ಬಾಟಲ್​ನಿಂದ ಕ್ಯಾಷಿಯರ್ ರಂಜಿತ್ ಎಂಬಾತನ ಮೇಲೆ ಮೂವರು ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಈ ವೇಳೆ ಚಾಕು ಇರಿತವೂ ಆಗಿದೆ. ಘಟನೆ ಸಂಬಂಧ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಮೂರು ಜನ ಆರೋಪಿಗಳಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.


Leave a Comment

Your email address will not be published. Required fields are marked *