ಬೆಳಗಾವಿಯಲ್ಲಿ ಕೆಬಿಎ ಕನ್ನಡಿಗ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ


ಬೆಳಗಾವಿನಲ್ಲಿ ದಿನಾಂಕ 23 ಆಗಸ್ಟ್ 2025 ರಂದು ನಡದೆ ಕೆಬಿಎ ನ್ಯೂಸ್ ಮೀಡಿಯಾ ಕಂಪನಿ ಹಾಗೂ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಸಂಯೋಗದಲ್ಲಿ ನಡೆದ 2025ರ ಕೆಬಿಎ ಕನ್ನಡಿಗ ಪ್ರಶಸ್ತಿ ಸಮಾರಂಭ ನಡೆಯಿತು ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದಂತ ಕೆಬಿಎ ನ್ಯೂಸ್ ಮೀಡಿಯಾ ಕಂಪನಿಯ ಮುಖ್ಯಸ್ಥರು ಹಾಗೂ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ರಾಜ್ಯಾಧ್ಯಕ್ಷರು ಆಗಿರುವ. ಡಾಕ್ಟರ್ ಬಿ ಎಚ್ ಜಮಾದಾರ್. ಹಾಗೂ ಈ ಕಾರ್ಯಕ್ರಮದ ಉದ್ಘಾಟಕರಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕರಾಗಿರ್ತಕ್ಕಂತ ಶ್ರೀಯುತ ಸಂಜಯ್ ಪಾಟೀಲ್ ಅವರು. ಹಾಗೂ ಕರ್ನಾಟಕ ಕಾಂಗ್ರೆಸ್ ಎಸ್ಸಿ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ದೊರೆ ಅವರು. ಬೆಳಗಾವ್ ಜಿಲ್ಲೆಯ ಖ್ಯಾತ ವೈದ್ಯರಾದ ಡಾ. ಸುಹೀಲ್ ನಾಲ್ಬಂದ್ ಅವರು. ಕೆಬಿಎ ನ್ಯೂಸ್ ಮೀಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಕರಾದ ಅನಿಲ್ ಕುಮಾರ್ ಹವಳೇರ . ಇವರೆಲ್ಲರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮವನ್ನು ಜ್ಯೋತಿ ಹಚ್ಚುವುದರ ಮೂಲಕ ಉದ್ಘಾಟನೆ ಮಾಡಲಾಯಿತು. ನಂತರ ಪ್ರಾಸ್ತಾವಿಕ ನುಡಿಯನ್ನು ಕೆಬಿಎ ನ್ಯೂಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನಿಲ್ ಕುಮಾರ್ ಹವಳೇರ ಅವರು 2023 ರಿಂದ ಇಲ್ಲಿಯವರೆಗೆ ಕನ್ನಡದಲ್ಲಿ ಕೆಬಿಎ ನ್ಯೂಸ್ ನಲ್ಲಿ ಸುದ್ದಿಗಳನ್ನು ಮಾಡುತ್ತಾ ಬಂದಿದ್ದೇವೆ ನಮ್ಮ ಚಾನೆಲ್ ಇಷ್ಟು ದಿನ ಕೇವಲ ಕರ್ನಾಟಕಕ್ಕೆ ಸೀಮಿತವಾಗಿತ್ತು. ಈ ಕಾರ್ಯಕ್ರಮದಿಂದ ಇಡೀ ಭಾರತದ ಅತ್ಯಂತ 4 ಭಾಷೆಯಲ್ಲಿ( ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ) ನ್ಯಾಷನಲ್ ಕೆಬಿಎ ನ್ಯೂಸ್ ಚಾನೆಲ್ ಆಗಿ ಸೆಪ್ಟೆಂಬರ್ 1 /2025 ರಿಂದ ಭಾರತದ ಅತ್ಯಂತ ಎಲ್ಲಾ ಡಿಜಿಟಲ್ ಪ್ಲಾಟ್ಫಾರ್ಮ್ ಗಳಲ್ಲಿ ನಮ್ಮ ಸುದ್ದಿಗಳು ಬರುತ್ತಿವೆ. ಈಗಾಗಲೇ ನಮ್ಮ KBA NEWS. In ವೆಬ್ಸೈಟ್ನಲ್ಲಿ 5 ರಿಂದ 6 ಭಾಷೆಯಲ್ಲಿ ಸುದ್ದಿಗಳು ಬರುತ್ತಾಇವೆ. ಮುಂದಿನ ದಿನಮಾನಗಳಲ್ಲಿ ಈ ನಮ್ಮ ಚಾನಲನ್ನು ದೊಡ್ಡಮಟ್ಟದ ರಾಷ್ಟ್ರೀಯ ಚಾನೆಲ್ ಆಗಿ ಬೆಳೆಸುತ್ತೇವೆ. ಎಲ್ಲರೂ ನಮ್ಮ ಚಾನೆಲ್ ಜೊತೆ ಕೈಜೋಡಿಸಿ ಎಂದು ತಿಳಿಸಿದರು. ನಂತರ ಕಾರ್ಯಕ್ರಮದ ಉದ್ಘಾಟಕರ ಭಾಷಣವನ್ನು ಸಂಜಯ್ ಪಾಟೀಲ್ ಅವರು ನಡೆಸಿಕೊಟ್ಟರು . ಈ ಕಾರ್ಯಕ್ರಮದ ಅಧ್ಯಕ್ಷತೆ ಭಾಷಣವನ್ನು ಕೆಬಿಎ ನ್ಯೂಸ್ ಮೀಡಿಯಾ ಕಂಪನಿ ಎಂಡಿ ಹಾಗೂ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾಕ್ಟರ್ ಬಿ ಎಚ್ ಜಮಾದಾರ್ ಅವರು ನೆರವೇರಿಸಿದರು ನಂತರ ಕರ್ನಾಟಕದ ನಾನಾ ಜಿಲ್ಲೆಯ ತಾಲೂಕಿನ ಎಲೆ ಮರಿಯಕಾಯಾಗಿ ಸಮಾಜ ಸೇವೆಗಳನ್ನು ಮಾಡಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿ ಉಳಿದುಕೊಂಡಿರುವಂತಹ ಅವರನ್ನು ಗುರುತಿಸಿ. ಕೆಬಿಎ ನ್ಯೂಸ್ ಮೀಡಿಯಾ ಕಂಪನಿ ವತಿಯಿಂದ 2025ರ ಕೆಬಿಎ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಈ ಕಾರ್ಯಕ್ರಮದ ವಂದನಾರ್ಪಣೆಯನ್ನು. ಕೆಬಿಎ ನ್ಯೂಸ್ ಮೀಡಿಯಾ ಕಂಪನಿಯ ರಾಜ್ಯ ವರದಿಗಾರರ ಮುಖ್ಯಸ್ಥರಾದ ರೇಣುಕ ಬಿ ಹೊಸೂರ್ ಅವರು ನಡೆಸಿಕೊಟ್ಟರು.
ಈ ಕಾರ್ಯಕ್ರಮದ ರೂವಾರಿಗಳಾಗಿರತಕ್ಕಂತ ರೇಣುಕಾ ಬಿ ಹೊಸೂರ್. ರಾಜ್ಯ ವರದಿಗಾರರ ಮುಖ್ಯಸ್ಥರು. ಹಾಗೂ ಸೀಮಾ ಪವಾರ್. ಮರಾಠಿ ಭಾಷೆ ನಿರೂಪಕರ ಮುಖ್ಯಸ್ಥರು. ನಿಸರ್ಗ ಮೋರೆ. ಕನ್ನಡ ಭಾಷೆ ನಿರೂಪಕರ ಮುಖ್ಯಸ್ಥರು. ಹಾಗೂ ಹಿಂದಿ ಬಾಷೆ ನಿರೂಪಕ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಶಸ್ತಿ ಪಡೆದ ಎಲ್ಲಾ ಪ್ರಶಸ್ತಿ ವಿಜೇತರು ಕಾರ್ಯಕ್ರಮದ ಬಗ್ಗೆ ತುಂಬಾ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದರು.


Leave a Comment

Your email address will not be published. Required fields are marked *