ಬ್ಯಾಡಗಿ ಪಟ್ಟಣದಲ್ಲಿ ಶ್ರೀ ವಿನಾಯಕ ಯುವಕ ಮಂಡಳಿ ಬ್ಯಾಡಗಿ ಗಣಪತಿ ಶೋಭಾ ಯಾತ್ರೆ ಅದ್ದೂರಿಯಾಗಿ ನಡೆಯಿತು!


ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಶ್ರೀ ವಿನಾಯಕ ಯುವಕ ಮಂಡಳಿಯ. ಬ್ಯಾಡಗಿ ಚಾ ಮಹಾರಾಜ್ ಗಣಪತಿಯ ಶೋಭಾ ಯಾತ್ರೆ ಅದ್ದೂರಿಯಾಗಿ ನಡೆಯಿತು.ಬ್ಯಾಡಗಿಯ ರೇಣುಕಾದೇವಿ ದೇವಸ್ಥಾನದಿಂದ ಸಂಗಮೇಶ್ವರ ನಗರದ ಮೂಲಕವಾಗಿ ಬ್ಯಾಡಗಿಯ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಬಸ್ಟ್ಯಾಂಡ್ ಮೂಲಕವಾಗಿ ಹಾಗೂ ಪ್ರಮುಖ ರಸ್ತೆಯ ಮೂಲಕವಾಗಿ ಸಂಚರಿಸುತ್ತಾ ಈ ಮಧ್ಯದಲ್ಲಿ ಶೋಭಾ ಯಾತ್ರೆಯಲ್ಲಿ ಭಾಗಿಯಾಗಿರತಕ್ಕಂತಹ ಸಾವಿರಾರು ಭಕ್ತಾದಿಗಳು ಬಗೆ ಬಗೆಯ ಹೂವುಗಳನ್ನು ಗಣೇಶನಿಗೆ ತೋರುತ್ತಾ ಹಾಗೂ ದೊಡ್ಡ ದೊಡ್ಡ ಹೂವಿನ ಮಾಲೆಗಳನ್ನು ಹಾಕುತ್ತಾ ಗಣೇಶನ ಕೃಪೆಗೆ ಪಾತ್ರರಾಗಿದ್ದರು. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ಮೀರಜ್ ನ ಆರಾಧ್ಯ ಡೊಳ್ಳು ವಾದ್ಯ ತಂಡದಲ್ಲಿ 60ಕ್ಕೂ ಹೆಚ್ಚು ಪುರುಷರ ಹಾಗೂ ಮಹಿಳೆಯರಿಂದ ಡೊಳ್ಳು ಕುಣಿತ. ಕರ್ನಾಟಕದ ಜಾನಪದ ಗೊಂಬೆಗಳ ಕುಣಿತ, ನಂದಿ ಕೋಲು ಕುಣಿತ, ವೀರಗಾಸೆ, ಇನ್ನೂ ಹಲವು ಸಕಲ ವಾದ್ಯ ವೈಭವಗಳೊಂದಿಗೆ. ಹೆಸರಾಂತ ರೇಣುಕಾ ಸೌಂಡ್ಸ್ ಡಿಜೆ ಯೊಂದಿಗೆ. ಪ್ರಮುಖ ಬೀದಿಯಲ್ಲಿ ಪಟಾಕಿಗಳನ್ನು ಸಿಡಿಸುತ್ತಾ. ಅದ್ದೂರಿಯಾಗಿ ಶೋಭಾ ಯಾತ್ರೆ ನಡೆಯಿತು.ಶ್ರೀ ವಿನಾಯಕ ಯುವಕ ಮಂಡಳಿಯ ಮುಖ್ಯಸ್ಥರಾದ ವೀರೇಶ್ ಹಿರೇಮಠ ಹಾಗೂ ಸಂಗಡಿಗರು . ಬ್ಯಾಡಗಿ ಚಾ ಮಹಾರಾಜ್. ಶೋಭಾ ಯಾತ್ರೆ ಯನ್ನು ಅದ್ದೂರಿಯಾಗಿ ನೆರವೇರಿಸಿದರು ಪಾಲ್ಗೊಂಡಂತಹ ಎಲ್ಲ ಭಕ್ತಾದಿಗಳಿಗೂ ಹಾಗೂ ಹಲವಾರು ಜಾನಪದ ಕಲಾವಿದರಿಗೂ. ಹಾಗೂ ಎಲ್ಲಾ ಆರಕ್ಷಕ ಸಿಬ್ಬಂದಿವರಿಗೂ. ಹಾಗೂ ಮಾಧ್ಯಮದ ಮಿತ್ರರಿಗೂ ಧನ್ಯವಾದಗಳು ತಿಳಿಸಿದರು.

KBA ನ್ಯೂಸ್ ಹಾವೇರಿ ಜಿಲ್ಲಾ ವರದಿ .


Leave a Comment

Your email address will not be published. Required fields are marked *