ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲು


ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲಾದ ಘಟನೆ ಅಫಜಲಪುರ ತಾಲೂಕಿನ ಬನ್ನಹಟ್ಟಿ ಗ್ರಾಮದಲ್ಲಿ ನಡೆದಿದೆ. ಸಧ್ಯ ಓರ್ವ ಬಾಲಕಿಯ ಶವವನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದು, ಮತ್ತೋರ್ವ ಬಾಲಕಿ ಶವಕ್ಕಾಗಿ ನದಿಯಲ್ಲಿ ಶೋಧಕಾರ್ಯ ಮುಂದುವರೆದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಭೀಮಾ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲು

ಮೃತ ಬಾಲಕಿಯರು

ಕಲಬುರಗಿ, ಅ.10: ಅಫಜಲಪುರ ತಾಲೂಕಿನ ಬನ್ನಹಟ್ಟಿ ಗ್ರಾಮದ ಬಳಿಯಿರುವ ಭೀಮಾ ನದಿ(Bhima River)ಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲಾದ ಘಟನೆ ನಡೆದಿದೆ. ಭೂಮಿಕಾ ದೊಡ್ಮನಿ(8) ಹಾಗೂ ಶ್ರಾವಣಿ ನಾಟೀಕಾರ(11) ನೀರುಪಾಲಾದವರು. ಇಂದು(ಅ.10) ನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಬಾಲಕಿಯರು, ಬಟ್ಟೆ ತೊಳೆದ ನಂತರ ನದಿಯಲ್ಲಿ ಈಜಾಡಲು ಮುಂದಾಗಿದ್ದರು.

ಈ ವೇಳೆ ನದಿ ನೀರಿನ ರಭಸಕ್ಕೆ ಭೂಮಿಕಾ ದೊಡ್ಡಮನಿ ಕೊಚ್ಚಿ ಹೋಗಿದ್ದಾರೆ. ಕೂಡಲೇ ಭೂಮಿಕಾ ರಕ್ಷಿಸಲು ಶ್ರಾವಣಿ‌ ಮುಂದಾಗಿದ್ದಳು. ಆದರೆ, ದುರಾದೃಷ್ಟವಶಾತ್​ ಇಬ್ಬರು ಬಾಲಕಿಯರು ಕೊಚ್ಚಿ ಹೋಗಿದ್ದಾರೆ. ಸಧ್ಯ ಚಿಂಚೋಳಿ ಗ್ರಾಮದ ಶ್ರಾವಣಿ ನಾಟೀಕಾರ್(11) ಶವವನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದು, ಭೂಮಿಕಾ ದೊಡ್ಮನಿ ಶವಕ್ಕಾಗಿ ನದಿಯಲ್ಲಿ ಶೋಧಕಾರ್ಯ ಮುಂದುವರೆದಿದೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಲಬುರಗಿ: ಅಷ್ಟ ತೀರ್ಥದಲ್ಲಿ ಸ್ನಾನ ಮಾಡಲು ಹೋಗಿ ಇಬ್ಬರು ಬಾಲಕರು ನೀರುಪಾಲು

ವಿದ್ಯುತ್ ತಂತಿ ತುಳಿದು ಡಿ ಗ್ರೂಪ್ ನೌಕರ ಸ್ಥಳದಲ್ಲೆ ಸಾವು

ಕಲಬುರಗಿ: ವಿದ್ಯುತ್ ತಂತಿ ತುಳಿದು ಡಿ ಗ್ರೂಪ್ ನೌಕರ ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ‌ಕರಜಗಿ ಗ್ರಾಮದಲ್ಲಿ ನಡೆದಿದೆ. ಶಿವಪುತ್ರ ಹಾವಳಗಿ (32) ಮೃತ ದುದೈವಿ. ಕರಜಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರನಾಗಿರುವ ಶಿವಪುತ್ರ, ಸಿಂಟೆಕ್ಸ್‌ನಲ್ಲಿ ನೀರು ಚೆಕ್ ಮಾಡಲು ತೆರಳಿದ್ದ ವೇಳೆ ವಿದ್ಯುತ್ ತಂತಿ ತುಳಿದು ದುರ್ಘಟನೆ ನಡೆದಿದೆ. ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


Leave a Comment

Your email address will not be published. Required fields are marked *