ಹುಬ್ಬಳ್ಳಿ: ಯುದ್ಧದ ಬದಲು ಗಾಂಧೀಜಿ ಶಾಂತಿ ಮಂತ್ರ ಜಪಿಸಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದ ವಿಚಾರ, ಗಾಂಧೀಜಿ ಶಾಂತಿ ಮಂತ್ರ ನಾಚಿಕೆಗೇಡಿತನದ್ದು,
ಪ್ರಧಾನಿ ಮೋದಿ ಒಂದು ಹೊಡೆದರೆ ಮತ್ತೊಂದು ಹೊಡೆಸಿಕೊಳ್ಳುವ ಮಾನಸಿಕತೆ ಹೊಂದಿಲ್ಲ. ಹೊಡೆಯೋ ಮುಂಚೆಯೇ ಉತ್ತರ ಕೊಡೋಕೆ ನರೇಂದ್ರ ಮೋದಿ ಕುಳಿತಿದ್ದಾರೆಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,
ಗಾಂಧಿ ವಾದದ ಪರಿಣಾಮದಿಂದಲೇ ನಾವು ಲಕ್ಷಾಂತರ ಜನರನ್ನು ಕಳೆದುಕೊಂಡುದ್ದೇವೆ. ಭಯೋತ್ಪಾದಕತೆ ಹುಟ್ಟು ಹಾಕಿದ್ದೆ ಕಾಂಗ್ರೆಸ್. ಕಾಂಗ್ರೆಸ್ ಬಟ್ಟೆ ಮೇಲೆ ಹಿಂದೂಗಳ ರಕ್ತದ ಕಲೆ ಇದೆ.
ಈ ಸಂದರ್ಭದಲ್ಲಿ ಗಾಂಧೀಜಿ ಬೇಕಿಲ್ಲ, ಸುಭಾಷ್ಚಂದ್ರ ಬೋಸ್ ರ ಮೂಲಕ ಉತ್ತರ ಕೊಡ್ತಿದ್ದೇವೆ ಎಂದರು.





