ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ಹಳಿಯಾಳ ಪಟ್ಟಣದ ಶ್ರೀ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ನ ಆವರಣದಲ್ಲಿ ಸ್ವಾಗತಿಸಿ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು. ಕನ್ನಡ ರಾಜ್ಯೋತ್ಸವವು ಕೇವಲ ಉತ್ಸವವಷ್ಟೇ ಅಲ್ಲ, ಅದು ಕನ್ನಡಿಗರಿಗೆ ತಮ್ಮ ಭಾಷೆಯ ಪ್ರೀತಿಯನ್ನು, ಸಂಸ್ಕೃತಿಯ ಗೌರವವನ್ನು, ಮತ್ತು ಪರಂಪರೆಯ ಅನನ್ಯತೆಯನ್ನು ಹೆಮ್ಮೆಯಿಂದ ಎತ್ತಿ ಹಿಡಿಯುವ ದಿನವಾಗಿದೆ.
ರಾಜ್ಯಾದ್ಯಂತ
ಈ ರಥವು ಕನ್ನಡ ಭಾಷೆಯ ಶ್ರೀಮಂತಿಯನ್ನು ತೋರಿಸಲು,ಕನ್ನಡಿಗರ ಆತ್ಮಾವಲಂಬನೆಯ ಚಿಹ್ನೆಯಾಗಿದ್ದು, ರಾಜ್ಯಾದ್ಯಂತ ಸಂಚರಿಸಿ ಸಂಸ್ಕೃತಿಯ ಆಳವನ್ನು ಪಸರಿಸುವ ಮೂಲಕ ಭಾಷಾ ಏಕತೆಯ ಹಾಗೂ ಕನ್ನಡಿಗರ ಗಾಢ ಬಾಂಧವ್ಯದ ಸಂಕೇತಗಳನ್ನು ಪ್ರದರ್ಶಿಸುತ್ತಿದೆ.ಕನ್ನಡ ಭಾಷೆಯ ವಿಸ್ತಾರ, ಅದರ ಶುದ್ಧತೆ ಹಾಗೂ ಆ ಧ್ವನಿಯ ಗರ್ಭದ ಒಡನಾಡಿಗಳನ್ನು ಆಕರ್ಷಿಸುವ ಶಕ್ತಿ ಕನ್ನಡ ತೇರಿನ ಮೂಲಕ ಎಲ್ಲೆಡೆ ಪಸರಿಸಲಾಗುತ್ತಿದ್ದು,ಕನ್ನಡ ನಾಡಿನ ಸಂಸ್ಕೃತಿಯನ್ನು ಎಲ್ಲೆಡೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಮೈಸೂರು ರಾಜ್ಯವಾಗಿದ್ದ ನಮ್ಮ ನಾಡು ಕರ್ನಾಟಕ ಎಂದು ನಾಮಕರಣಗೊಂಡು ೫೦ ವರ್ಷ ಪೂರೈಸಿದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕನ್ನಡ ನಮ್ಮೆಲ್ಲರ ಉಸಿರಾಗಲಿ ಎಂದು ಶುಭಹಾರೈಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟನ ಆಡಳಿತಾಧಿಕಾರಿಗಳು, ಕೆನರಾ ಬ್ಯಾಂಕ್ ದೇಶಪಾಂಡೆ ಆರ್-ಸೆಟಿಯ ನಿರ್ದೇಶಕರು, ಡಿಪಿಐಟಿಐ ಪ್ರಾಚಾರ್ಯರು ಮತ್ತು ಶ್ರೀ ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಸಿಬ್ಬಂದಿಗಳು, ತರಬೇತ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





