ಇಂದು ನಡೆದ ಮಾಧ್ಯಮ ಗೋಷ್ಠಿಯಲ್ಲಿ ಹಳಿಯಾಳ ಮತಕ್ಷೇತ್ರದ ಶಾಸಕರಾದ ಶ್ರೀ ಆರ್ ವಿ ದೇಶಪಾಂಡೆ ಅವರು ಈ ವರ್ಷ ಮಳೆ ಗಾಳಿ ಹೆಚ್ಚಾಗಿರುವುದರಿಂದ ನನ್ನ ಮತ ಕ್ಷೇತ್ರದಲ್ಲಿರುವ ಎಲ್ಲಾ ರೈತರು ಬೆಳೆದಿರುವ ಭತ್ತ ಮೆಕ್ಕೆಜೋಳ ಹಾನಿಯಾಗಿರುವ ರೈತರಿಗೆ ಸರಕಾರದಿಂದ ಬೆಳೆ ಪರಿಹಾರ ಸಿಗುತ್ತದೆ. ರೈತರಿಗೆ ಶುಭ ಸಂದೇಶವನ್ನು ತಿಳಿಸಿದ್ದಾರೆ. ಹಾಗೂ. ಇಂದಿರಾ ಗಾಂಧಿ ವಸತಿ ಶಾಲೆ ಸಾಮ್ರಾಣಿ S T ಶಾಲೆ ನೂತನವಾಗಿ ಕಟ್ಟಡ ನಿರ್ಮಾಣಕ್ಕೆ. 22.00 ಕೋಟಿ ಅನುದಾನ ಮಂಜೂರಾಗಿದೆ. ಇದು ಕೂಡ ಟೆಂಡರ್ ಕರೆಯಲಾಗಿದೆ. ಹಾಗೂ ದಾಂಡೇಲಿ ತಾಲೂಕಿನಲ್ಲಿ ನೂತನವಾಗಿ ಅಗ್ನಿಶಾಮಕ ದಳ ಮಂಜೂರು ಆಗಿದ್ದು 3.00 ಕೋಟಿ ಅನುದಾನ ಮಂಜೂರಾಗಿದೆ ಇದು ಕೂಡ ಟೆಂಡರ್ ಕರೆಯಲಾಗಿದೆ ಎಂದು ತಮ್ಮ ಗ್ರಹ ಕಚೇರಿಯಲ್ಲಿ ಪತ್ರಿಕ ಗೋಷ್ಠಿ ಕರೆ ಕಳಿಸಿ ರೈತರಿಗೆ ಕೃಷಿ ಇಲಾಖೆಯಿಂದ ಸಾಲ ಸೌಲಭ್ಯ ದೊರೆಯಲಿದೆ . ಎಂದು ತಿಳಿಸಿದರು. ಈ ಒಂದು ಸಂದರ್ಭದಲ್ಲಿ. ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರು. ಕೃಷ್ಣ ಪಾಟೀಲ್. ಗಿರೀಶ್. ಸುಭಾಷ್ ಕೊರವೇಕರ, ಹಾಗೂ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಹಳಿಯಾಳ ಮತಕ್ಷೇತ್ರ ರೈತ ಬಾಂಧವರು ಉಪಸ್ಥಿತರಿದ್ದರು
ವರದಿ:
ಹಳಿಯಾಳ ರಮೇಶ್ ಯದೋನಿ





