ವಿವಿಧ ಬೇಡಿಕೆಗಳ ಕುರಿತು ರೈತ ಸಂಘಟನೆಯಿಂದ ಪ್ರತಿಭಟನೆ.


ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಕುರಿತು ರೈತ ಸಂಘದ ಜಿಲ್ಲಾಧ್ಯಕ್ಷರಾದ ರಾಮಣ್ಣ ವಿ ಕೆಂಚಳ್ಳೆರ ಇವರ ನೇತೃತ್ವದಲ್ಲಿ ಶ್ರೀ ಕುಮಾರೇಶ್ವರ ಮಠ ದಿಂದ ಗಾಂಧಿ ಸರ್ಕಲ್ ಹಾನಗಲ್ ಇಲ್ಲಿಯವರೆಗೆ ಬೃಹತ್ ಟ್ರ್ಯಾಕ್ಟರ್ ರಾಲಿ ಹಮ್ಮಿಕೊಂಡು ಗಾಂಧಿ ಸರ್ಕಲ್ ನಲ್ಲಿ ತಾಸಿಲ್ದಾರ್ ಮತ್ತು ಉಳಿದ ಇಲಾಖೆಗಳ ಅಧಿಕಾರಿಗಳು ಬರುವವರೆಗೂ ಹೋರಾಟವನ್ನು ಕೈಗೊಂಡಿರುತ್ತಾರೆ ನಂತರ ತಹಸಿಲ್ದಾರ್ ಶ್ರೀಮತಿ ರೇಣುಕಾ ಎಸ್ ಮಂಜುನಾಥ್ ಬಣಕಾರ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಬಂದ ನಂತರ ಅವರಿಗೆ ಮನವಿಗಳನ್ನು ಸಲ್ಲಿಸಿ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕೆಂದು ಒತ್ತಾಯಿಸಿದರು .ಅಡಿವೆಪ್ಪ ಆಲದಕಟ್ಟೆ ಮಲ್ಲಿಕಾರ್ಜುನ್ ಬಳ್ಳಾರಿ ಮರಿಗೌಡ ಪಾಟೀಲ್ ಮಲ್ಲೇಶಪ್ಪ ಪರಪ್ಪನವರ ವಾಸುದೇವ ಕಮಾಟಿ ಶ್ರೀಕಾಂತ ದುಂಡಣ್ಣನವರ್ ಮಹಾಲಿಂಗಪ್ಪ ಅಕ್ಕಿವಳ್ಳಿ ರುದ್ರಪ್ಪ ಅಣ್ಣಿ ಮತ್ತು ಜಿಲ್ಲೆ ತಾಲೂಕಿನ ರೈತ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಗ್ರಾಮ ಘಟಕದ ಅಧ್ಯಕ್ಷರು ಸದಸ್ಯರು ಎಲ್ಲರೂ ಸೇರಿ ಹೋರಾಟವನ್ನು ಯಶಸ್ವಿಗೊಳಿಸಿದರು.


Leave a Comment

Your email address will not be published. Required fields are marked *