‘ಬ್ರ್ಯಾಂಡ್ ಬೆಂಗಳೂರು’ ಕನಸು ಹೊಂದಿರುವ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಪಂಚ ಗ್ಯಾರೆಂಟಿಗಳು ಯಶಸ್ವಿಯಾಗಿ, ಇದು ಐತಿಹಾಸಿಕ ನ್ಯಾಯ ಎನ್ನುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರಕ್ಕೆ ಎರಡರ ಹರೆಯ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷವಾಗಿದೆ. ಜನರ ಲೂಟಿ ಹೊಡೆದಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೆಂಗಳೂರು ಸಮಸ್ಯೆ ಮುಂದುವರಿದಿದೆ ಎಂದು ಬಿಜೆಪಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹರಿಹಾಯ್ದಿದ್ದಾರೆ. ಎರಡು ವರ್ಷಗಳ ಸಾಧನೆಯ ಇದೇ ಎಂದು ಪಟ್ಟಿ ನೀಡಿದ್ದಾರೆ. ಅದರ ವಿವರ ಇಲ್ಲಿದೆ.
ಅಧಿಕಾರಕ್ಕಾಗಿ ಬೇಕಾಬಿಟ್ಟಿಯಾಗಿ ಅಪೂರ್ಣ ಗ್ಯಾರಂಟಿಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದು ಜನರನ್ನು ಲೂಟಿ ಹೊಡೆದಿದ್ದೇ ಕಾಂಗ್ರೆಸ್ ಸರ್ಕಾರದ ದ ಎರಡು ವರ್ಷ ಸಾಧನೆಯಾಗಿದೆ. ಅಸಮರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜನತೆಯ ವಿಶ್ವಾಸ ಗಳಿಸುವುದು ಬಿಡಿ, ತಮ್ಮ ಆಪ್ತ ಸಲಹೆಗಾರರ ವಿಶ್ವಾಸವನ್ನು ಪಡೆಯಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ದೂರಿದೆ.
ಎರಡು ವರ್ಷ ಪೂರೈಸಿದ ಹಿನ್ನೆಲೆ ರಾಜ್ಯ ಸರ್ಕಾರ ವಿಜಯನಗರದಲ್ಲಿ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಈ ವೇಳೆ ವಿಜಯೇಂದ್ರ ಅವರು ಎರಡು ವರ್ಷಗಳ ಸಾಧನೆ ಪಟ್ಟಿ ನೀಡಿದ್ದಾರೆ
* ಮಿತಿಮೀರಿದ ಭ್ರಷ್ಟಾಚಾರ * ನಿರಂತರ ಬೆಲೆ ಏರಿಕೆ * ಏರುತ್ತಿರುವ ರೈತರ ಆತ್ಮಹತ್ಯೆಗಳು * ಸರಣೀ ಬಾಣಂತಿಯರ ಸಾವುಗಳು * ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು * ನಿರಂತರ ಬೆದರಿಕೆಯಲ್ಲಿರುವ ಹಿಂದೂಗಳ ಜೀವನ * ಮೂಲಸೌಕರ್ಯಭಿವೃದ್ಧಿ ಮೂಲೆಗುಂಪು * ಓಲೈಕೆ ರಾಜಕಾರಣಕ್ಕಾಗಿ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಬೆಂಬಲ * ರಾಜ್ಯದಲ್ಲಿ ನಿರುದ್ಯೋಗದ ತಾಂಡವ * ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳು ಮತ್ತು ಆಶ್ವಾಸನೆಗಳು ಸಂಪೂರ್ಣ ವಿಫಲ. * ಸ್ಥಗಿತಗೊಂಡ ಅಭಿವೃದ್ಧಿ * ಪ್ರಧಾನ ಮಂತ್ರಿ-ಕಿಸಾನ್ ಸಮ್ಮಾನ್ ನಿಧಿ, ರೈತ ವಿದ್ಯಾನಿಧಿ ಮತ್ತು ಇತರ ರೈತ ಕಲ್ಯಾಣ ಯೋಜನೆಗಳ ರದ್ದು. * ಬ್ರ್ಯಾಂಡ್ ಬೆಂಗಳೂರು ಬ್ಯಾಡ್ ಬೆಂಗಳೂರಾಯಿತು. * ಗ್ರೇಟರ್ ಬೆಂಗಳೂರು ವಾಟರ್ ಬೆಂಗಳೂರು. * ವಾರಂಟಿಯಿಲ್ಲದ ಗ್ಯಾರಂಟಿಗಳು. * 2.5 ಲಕ್ಷ ಕೋಟಿ ರೂ ಸಾಲವೇ ಸಾಧನೆ. ಹೆಜ್ಜೆ ಇಡದ ಎರಡು ವರ್ಷ, ಬೆಲೆ ಏರಿಕೆ-ಭ್ರಷ್ಟತೆಯ ಕರಾಳ ಸ್ಪರ್ಶ ನೀಡಲಾಗಿದೆ ಎಂದು ಅವರು ಕಾಂಗ್ರೆಸ್ ಆಡಳಿತವನ್ನು ಟೀಕಿಸಿದ್ದಾರೆ.





