ನಮ್ಮ ಪಾಕಿಸ್ತಾನ ಎಂದ ಖರ್ಗೆಗೆ ನಾಚಿಕೆಯಾಗಬೇಕು : ಸಂಸದ ಗೋವಿಂದ ಕಾರಜೋಳ ವಾಗ್ದಾಳಿ


ಬಾಗಲಕೋಟೆ : ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಮ್ಮ ಪಾಕಿಸ್ಥಾನ ಎಂದಿದ್ದ ಭಾಷಣಕ್ಕೆ ಖರ್ಗೆಗೆ ನಾಚಿಕೆಯಾಗಬೇಕೆಂದು ಸಂಸದ ಗೋವಿಂದ ಕಾರಜೋಳ ವಾಗ್ದಾಳಿ ಮಾಡಿದ್ದಾರೆ

ಬಾಗಲಕೋಟೆಯಲ್ಲಿ ಮಾಜಿ ಸಚಿವ, ಸಂಸದ ಗೋವಿಂದ ಕಾರಜೋಳ ಮಾಧ್ಯಮಗಳೊಂದಿಗೆ ಮಾತನಾಡಿದರು ಕಾಂಗ್ರೆಸ್‌ ನ ಎಲ್ಲಾ ನಾಯಕರ ನೆಂಟರು ಪಾಕಿಸ್ಥಾನದಲ್ಲಿ ಇದ್ದಂಗ ಕಾಣಿಸುತ್ತದೆ. ಅದಕ್ಕಾಗಿ ನಮ್ಮ ಪಾಕಿಸ್ತಾನ ಎಂದು ಸಂಭೋದನೆ ಮಾಡ್ತಿದ್ದಾರೆ..

ನಮ್ಮ ವೈರಿ ರಾಷ್ಟ್ರ ನಮ್ಮ ಶತ್ರುಗಳ ಬಗ್ಗೆ ಯಾವ ಭಾಷೆ ಬಳಸಬೇಕು,ಅದೇ ಶಬ್ದದಲ್ಲಿ ಮಾತಾಡಾಬೇಕು ಅದನ್ನು ಬಿಟ್ಟು ಈ ರೀತಿ ಹೇಳೋದಕ್ಕೆ ಅವರಿಗೆ ನಾಚಿಕೆ ಆಗಬೇಕು
ನಮ್ಮ ಪಾಕಿಸ್ತಾನ ಎಂದು ಯಾರೂ ಕೂಡಾ ಹೇಳಬಾರದು ಸ್ವಾತಂತ್ರ್ಯ ಬಂದು 47 ವರ್ಷದಿಂದಲೂ ಅವರ ಜೊತೆ ಯುದ್ಧ ಮಾಡ್ತಾ ಬಂದಿದ್ದೇವೆ..

ನಮಗೆ ಪಾಕಿಸ್ತಾನದಿಂದ ಸಾಕಷ್ಟು ನಷ್ಟವಾಗಿದೆ ಇವತ್ತಿಗೂ ಕೂಡ ಪಾಕಿಸ್ತಾನ ಉಗ್ರರನ್ನು ಪೋಷಿಸುವ ಕೆಲಸ ಮಾಡುತ್ತಿದೆ. ಒಬ್ಬ ಹಿರಿಯ ನಾಯಕರಾಗಿ ನಮ್ಮ ಪಾಕಿಸ್ತಾನ ಎಂದು ಹೇಳಬಾರದಿತ್ತು. ಅದನ್ನ ನಾನು ಸಹಿಸಿಕೊಳ್ಳುವದಿಲ್ಲ ನಮ್ಮ ಪಾಕಿಸ್ತಾನ ಅನ್ನೋದನ್ನ ನಾನು ಖಂಡಿಸುತ್ತೇನೆ.ಪಾಕಿಸ್ತಾನದ ಎಲ್ಲಾ ನೆಂಟರು ಕಾಂಗ್ರೆಸ್ ನಲ್ಲಿದ್ದಾರೆಂದು ಭಾವಿಸಿತ್ತೇನೆಂದು ಅವರು ತೀವ್ರ ವಾಗ್ದಾಳಿ ನಡೆಸಿದರು


Leave a Comment

Your email address will not be published. Required fields are marked *