ವರನ ತಾಯಿ‌ ಕುರುಡು ಎಂಬ ವಿಷಯ ತಿಳಿದು ವಧು ಆತ್ಮಹತ್ಯೆಗೆ ಶರಣು


ವರನ ತಾಯಿ‌ ಕುರುಡು ಎಂಬ ವಿಷಯ ತಿಳಿದು ವಧು ಆತ್ಮಹತ್ಯೆಗೆ ಶರಣು

ಚಿಕ್ಕೋಡಿ:ವರನ ತಾಯಿ ಕುರುಡು ಎಂದು ತಿಳಿದ ನಂತರ ವಧು ಮದುವೆಯ ಹಿಂದಿನ ದಿನ ಮಧ್ಯರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ಸಂಭವಿಸಿದೆ.

ಶ್ರುತಿ ಶಂಕರ್ ಬುರುಡ (ವಯಸ್ಸು 24) ಆತ್ಮಹತ್ಯೆಗೆ ಶರಣಾದ ವಧು.

ನವಲಿಹಾಳ ಗ್ರಾಮದ ಮೃತ ಶ್ರುತಿ ಶಂಕರ ಬುರುಡ ಬೆಳಗಾವಿಯ ಹುಡುಗನೊಂದಿಗೆ ನಿಶ್ಚಿತಾರ್ಥವಾಗಿತ್ತು.

ಮೇ 25 ರಂದು ಮದುವೆ ನಡೆಯಬೇಕಿತ್ತು. 24 ನೇ ದಿನಾಂಕದಂದು ರಾತ್ರಿ ಅರಿಶಿನ ಹಚ್ಚುವ ಕಾರ್ಯಕ್ರಮವಿತ್ತು.

ಅದೇ ದಿನ ರಾತ್ರಿ ಶ್ರುತಿ ಮನೆಯಿಂದ ಕಾಣೆಯಾಗಿದ್ದಳು.ಮರುದಿನ ಬಾವಿಯಲ್ಲಿ ಶ್ರುತಿ ಮೃತದೇಹ ಪತ್ತೆಯಾಗಿದೆ. ಖಡಕಲಾಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.


Leave a Comment

Your email address will not be published. Required fields are marked *