ಸಲೂನ್ & ಸ್ಪಾಗೆ ನುಗ್ಗಿ ಲೇಡಿ ಗ್ಯಾಂಗ್‌ ಅಟ್ಟಹಾಸ


ಬೆಂಗಳೂರು, ಮೇ 31: ನಗರದಲ್ಲಿ ಅಮೃತಹಳ್ಳಿಯ ರಾಯಲ್ ಸಲೂನ್ ಮತ್ತು ಸ್ಪಾಗೆ ಎಂಟ್ರಿ ಕೊಟ್ಟಿದ್ದ ಲೇಡಿ ಡಾನ್‌ ಗ್ಯಾಂಗ್ ಮಾಲೀಕ ಸಂಜು ಮೇಲೆ ದಾಳಿ ಮಾಡಿದ್ದರು.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಬಂಧಿಸಲಾಗಿದೆ. ಬಂಧಿತ ಮೂವರಲ್ಲಿ ಕಾವ್ಯಗೆ ರೌಡಿಸಂ ಲಿಂಕ್​ ಇದೆ. ಹೇಗೆ ಅಂದರೆ ಬೆಂಗಳೂರಿನ ರೌಡಿಶೀಟರ್ ಮುನಿಕೃಷ್ಣ ಅಲಿಯಾಸ್​ ಅಮೃತಹಳ್ಳಿ ಕಪ್ಪೆ ಪ್ರಿಯತಮೆ ಈ ಕಾವ್ಯ. ತನ್ನ ರೌಡಿ ಲವರ್​ ಕಪ್ಪೆ ಹೆಸರನ್ನ ಬಳಸಿಕೊಂಡು ಏರಿಯಾದಲ್ಲಿ ಕಾವ್ಯ ಫುಲ್ ಹವಾ ಮೈಂಟೇನ್​ ಮಾಡಿದ್ದಳು.

ಸದ್ಯ ಕಪ್ಪೆ ಗೂಂಡಾ ಕಾಯ್ದೆಯಡಿ ಬಂಧನವಾಗಿ ಕಲಬುರಗಿ ಜೈಲಲ್ಲಿದ್ದಾನೆ. ಈ ಹಿಂದೆ ಕಪ್ಪೆ ಬೆಂಗಳೂರಿನಿಂದ ಗಡಿಪಾರು ಆಗಿದ್ದ. ಅತ್ತ ಲವರ್​​ ಜೈಲಿನಲ್ಲಿದ್ದರೆ ಇತ್ತ ಕಾವ್ಯ ಸ್ನೇಹಿತೆ ಸ್ಮಿತಾ ಜೊತೆ ಸ್ಪಾ ನಲ್ಲಿ‌ ಕೆಲಸ ಮಾಡಿತ್ತಿದ್ದಳು.ನಿನ್ನೆ ಅಮೃತಹಳ್ಳಿ ರಾಯಲ್ ಲೈಫ್ ಸ್ಪಾಗೆ ಎಂಟ್ರಿ ಕೊಟ್ಟಿದ್ದ ಕಾವ್ಯ ಆ್ಯಂಡ್​ ಗ್ಯಾಂಗ್​​ ಸಿಗರೇಟ್ ಸೇದುತ್ತಾ ಹಲ್ಲೆ ಮಾಡಿ ಅವಾಜ್ ಬಿಟ್ಟಿದ್ದಳು. ಹಲ್ಲೆ ಮಾಡಿದ್ದಲ್ಲದೇ ಕಾರಲ್ಲಿ ಸಂಜುನನ್ನು ಕಿಡ್ನಾಪ್ ಮಾಡಿ ಅಮೃತಹಳ್ಳಿ ಪೂರ್ತಿ ಸುತ್ತಾಡಿಸಿ ಹಲ್ಲೆ ಮಾಡಿದ್ದಳು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವ್ಯ ಕೂಡ  ಜೈಲುಪಾಲಾಗಿದ್ದಾಳೆ.


Leave a Comment

Your email address will not be published. Required fields are marked *