ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು, ಡಕಾಯಿತನ​ ಮೇಲೆ ಫೈರಿಂಗ್​


ಸೋಮವಾರ ಬೆಳ್ಳಂ ಬೆಳಗ್ಗೆ ಹುಬ್ಬಳ್ಳಿಯಲ್ಲಿ ಗುಂಡಿನ ಸದ್ದು ಕೇಳಿಸಿದೆ. ಹಲ್ಲೆ ಮಾಡಲು ಯತ್ನಿಸಿದ ಆರೋಪಿಯ ಮೇಲೆ ಹುಬ್ಬಳ್ಳಿಯ ಗೋಕುಲ್​ ರೋಡ್​ ಠಾಣೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಯನ್ನು ಶೀಘ್ರದಲ್ಲೆ ವಿಚಾರಣೆಗೆ ಒಳಪಡಿಸಲಾಗುತ್ತದೆ.

ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಗ್ಗೆ ಗುಂಡಿನ ಸದ್ದು, ಡಕಾಯಿತನ​ ಮೇಲೆ ಫೈರಿಂಗ್​

ಆರೋಪಿ ಮಹೇಶ್​

ಹುಬ್ಬಳ್ಳಿ, ಅಕ್ಟೋಬರ್​ 07: ಡಕಾಯಿತಿ ಗ್ಯಾಂಗ್​ ಸದಸ್ಯನ ಮೇಲೆ ಗೋಕುಲ ರೋಡ್ ಪೊಲೀಸರು (Gokul Road Police) ಗುಂಡು ಹಾರಿಸಿ, ಬಂಧಿಸಿದ್ದಾರೆ. ಮಹೇಶ್ ಸೀತಾರಾಮ್ ಕಾಳೆ ಬಂಧಿತ ವ್ಯಕ್ತಿ. ಸೋಮವಾರ ನಸುಕಿನ ಜಾವ ಮಹೇಶ್ ಮತ್ತು ಈತನ ಗ್ಯಾಂಗ್‌ ಮನೆ ಕಳ್ಳತನಕ್ಕೆ ಇಳಿದಿತ್ತು. ವಿಚಾರ ತಿಳಿದು ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿ ಮಹೇಶ್​ ಸೀತಾರಾಮ್​​ನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಉಳಿದವರು ಪರಾರಿಯಾದರು.

ಉಳಿದ ಡಕಾಯಿತರು ಇರುವ ಜಾಗ ತೋರಿಸುತ್ತೇನೆ ಅಂತ ಮಹೇಶ್ ಪೊಲೀಸರನ್ನು ಕರೆದುಕೊಂಡು ಹೋಗಿದ್ದಾನೆ. ಡಕಾಯಿತರು ಇದ್ದ ಸ್ಥಳಕ್ಕೆ ಹೋದ ಬಳಿಕ ಮಹೇಶ್​ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ಸ್ಥಳಕ್ಕೆ ಕಮಿಷನರ್ ಶಶಿಕುಮಾರ್ ಭೇಟಿ

ಪ್ರಾಣ ರಕ್ಷಣೆಗಾಗಿ ಗೋಕುಲ ರೋಡ್ ಪೊಲೀಸ್ ಠಾಣೆಯ ಪಿಎಸ್​ಐ ಸಚಿನ ದಾಸರೆಡ್ಡಿ ಮಹೇಶ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡು ತಿಂದು ನೋವಿನಿಂದ ಒದ್ದಾಡುತ್ತಿದ್ದ ಮಹೇಶ್​ನನ್ನು ಹುಬ್ಬಳ್ಳಿ ಕಿಮ್ಸ್​ಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗೋಕುಲ ರೋಡ್ ಪೊಲೀಸ್ ಠಾಣೆಯ ಪಿಎಸ್​​ಐ ಸಚಿನ್​ ಮತ್ತು ಪೇದೆ ವಸಂತ ಗುಡಿಗೇರಿಗೆ ಅವರಿಗೆ ಗಾಯವಾಗಿದೆ.


Leave a Comment

Your email address will not be published. Required fields are marked *