ಭಾರತದ ಭದ್ರತೆಗೆ ಧಕ್ಕೆ ತರುವ ಕೆಲಸವನ್ನು ನಾವು ಮಾಡುವುದಿಲ್ಲ: ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು


ಭಾರತದ ಭದ್ರತೆಗೆ ಧಕ್ಕೆ ತರುವ ಕೆಲಸವನ್ನು ನಾವು ಎಂದೂ ಮಾಡುವುದಿಲ್ಲ ಎಂದು ಮಾಲ್ಡೀವ್ಸ್​ ಅಧ್ಯಕ್ಷ ಮೊಹಮ್ಮದ್ ಮುಯಿಝು ಹೇಳಿದ್ದಾರೆ. ಭಾರತಕ್ಕೆ ಆಗಮಿಸಿರುವ ಅವರು, ಈಗಾಗಲೇ ಹದಗೆಟ್ಟಿರುವ ಭಾರತ ಹಾಗೂ ಮಾಲ್ಡೀವ್ಸ್​ ನಡುವಿನ ಉದ್ವಿಗ್ನತೆಗೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಭಾರತದ ಭದ್ರತೆಗೆ ಧಕ್ಕೆ ತರುವ ಕೆಲಸವನ್ನು ನಾವು ಮಾಡುವುದಿಲ್ಲ: ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು

ಮೊಹಮ್ಮದ್ ಮುಯಿಝುImage Credit source: Hindustan Times

‘‘ಭಾರತದ ಭದ್ರತೆಗೆ ಧಕ್ಕೆ ತರುವ ಕೆಲಸವನ್ನು ನಾವು ಎಂದೂ ಮಾಡುವುದಿಲ್ಲ’’ ಎಂದು ಮಾಲ್ಡೀವ್ಸ್​ ಅಧ್ಯಕ್ಷ ಮೊಹಮ್ಮದ್ ಮುಯಿಝು ಹೇಳಿದ್ದಾರೆ. ಭಾರತಕ್ಕೆ ಆಗಮಿಸಿರುವ ಅವರು, ಈಗಾಗಲೇ ಹದಗೆಟ್ಟಿರುವ ಭಾರತ ಹಾಗೂ ಮಾಲ್ಡೀವ್ಸ್​ ನಡುವಿನ ಉದ್ವಿಗ್ನತೆಗೆ ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡುವ ಮೊದಲು ಅಧ್ಯಕ್ಷ ಮುಯಿಝು ಅವರು ಚೀನಾದೊಂದಿಗೆ ಮಾಲ್ಡೀವ್ಸ್‌ನ ಸಂಬಂಧದ ಬಗ್ಗೆ ಭಾರತಕ್ಕಿರುವ ಕಳವಳವನ್ನು ನಿವಾರಿಸಲು ಪ್ರಯತ್ನಿಸಿದರು. ಉಭಯ ದೇಶಗಳ ನಡುವಿನ ಸಂಬಂಧಗಳು ಪರಸ್ಪರ ಗೌರವ ಮತ್ತು ಸಾಮಾನ್ಯ ಹಿತಾಸಕ್ತಿಗಳನ್ನು ಆಧರಿಸಿವೆ.

ನಾಲ್ಕು ದಿನಗಳ ಪ್ರವಾಸಕ್ಕಾಗಿ ನವದೆಹಲಿಗೆ ಆಗಮಿಸಿದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಭಾರತದ ಭದ್ರತೆಯನ್ನು ಹಾಳುಮಾಡುವ ಯಾವುದನ್ನೂ ತಮ್ಮ ದೇಶ ಎಂದಿಗೂ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಮೊದಲು ಪ್ರಧಾನಿ ನರೇಂದ್ರ ಮೋದಿ ಲಕ್ಷದ್ವೀಪದ ಭೇಟಿ ಬಗ್ಗೆ ಮಾಲ್ಡೀವ್ಸ್​ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಬಳಿಕ ಭಾರತೀಯ ಸೈನಿಕರನ್ನು ಅಲ್ಲಿಂದ ಹಿಂತೆಗೆಯುವಂತೆ ಕೇಳಿದ್ದಕ್ಕೆ ಮಾಲ್ಡೀವ್ಸ್​ ಹಾಗೂ ಭಾರತದ ಸಂಬಂಧ ಹಳಸಿತ್ತು.

ಭಾರತ ಮತ್ತು ಮಾಲ್ಡೀವ್ಸ್ ನಡುವಣ ಬಾಂಧವ್ಯ ಗಟ್ಟಿಯಾಗಿದ್ದು, ಅವರ ಭೇಟಿ ಅದನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದ್ದಾರೆ. ಕಳೆದ ವರ್ಷ ತನ್ನ ಇಂಡಿಯಾ ಔಟ್ ಅಭಿಯಾನದ ಮೇಲೆ ಮುಯಿಝು ಅಧಿಕಾರಕ್ಕೆ ಬಂದಿದ್ದರು. ಮುಯಿಝು ಅವರು ಭಾನುವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿದರು.

ಅವರು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಜೂನ್‌ನಲ್ಲಿ ಮೋದಿ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮುಯಿಝು ಅವರ ಎರಡನೇ ಭೇಟಿ ಇದಾಗಿದೆ.


Leave a Comment

Your email address will not be published. Required fields are marked *