ರತನ್ ಟಾಟಾ ಆಸ್ಪತ್ರೆಗೆ ದಾಖಲು; ಆರೋಗ್ಯಸ್ಥಿತಿ ಹದಗೆಟ್ಟಿರುವುದು ಸುಳ್ಳು, ಹುಷಾರಾಗಿದ್ದೀನೆಂದು ಟಾಟಾ ಮೆಸೇಜ್


Ratan Tata health updates: ಹಿರಿಯ ಉದ್ಯಮಿ ರತನ್ ಟಾಟಾ ಆರೋಗ್ಯ ಹದಗೆಟ್ಟು ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದಾರೆ ಎನ್ನುವ ಮಾಹಿತಿ ಹರಿದಾಡಿದೆ. ಅದರ ಬೆನ್ನಲ್ಲೇ ಖುದ್ದಾಗಿ ರತನ್ ಟಾಟಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ತಾನು ಆರೋಗ್ಯವಾಗಿದ್ದೇನೆ ಎಂದಿದ್ದಾರೆ. ವಯೋಸಹಜ ಕಾರಣಕ್ಕೆ ಮೆಡಿಕಲ್ ಚೆಕಪ್​​ಗೆ ಆಸ್ಪತ್ರೆಗೆ ಬಂದಿದ್ದೆನಷ್ಟೇ ಎಂದಿದ್ದಾರೆ ಅವರು.

ರತನ್ ಟಾಟಾ ಆಸ್ಪತ್ರೆಗೆ ದಾಖಲು; ಆರೋಗ್ಯಸ್ಥಿತಿ ಹದಗೆಟ್ಟಿರುವುದು ಸುಳ್ಳು, ಹುಷಾರಾಗಿದ್ದೀನೆಂದು ಟಾಟಾ ಮೆಸೇಜ್

ರತನ್ ಟಾಟಾ

ಮುಂಬೈ, ಅಕ್ಟೋಬರ್ 7: ಭಾರತದ ಹಿರಿಯ ಉದ್ಯಮಿ ರತನ್ ಟಾಟಾ ಆರೋಗ್ಯ ಪರಿಸ್ಥಿತಿ ಹದಗೆಟ್ಟು ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ. ರಕ್ತದೊತ್ತಡದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದರಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ವರದಿಗಳ ಪ್ರಕಾರ, ಇಂದು ಮಧ್ಯರಾತ್ರಿ 12:30ರಿಂದ 1 ಗಂಟೆ ಆಸುಪಾಸಿನಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿರುವುದು ತಿಳಿದುಬಂದಿದೆ. ಇದಾದ ಬಳಿಕ ಅವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ರತನ್ ಟಾಟಾ ಅವರೇ ಖುದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ಧಾರೆ. ತಾನು ಆರಾಮವಾಗಿದ್ದೇನೆ. ವಯೋಸಹಜ ಕಾರಣಕ್ಕೆ ವೈದ್ಯಕೀಯ ತಪಾಸಣೆ ಮಾಡಿಸುತ್ತಿದ್ದೇನೆ ಅಷ್ಟೇ. ಯಾರೂ ಆತಂಕ ಪಡಬೇಕಿಲ್ಲ ಎಂದು 86 ವರ್ಷದ ರತನ್ ಟಾಟಾ ಇನ್ಸ್​ಟಾಗ್ರಾಮ್ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಡೆಲಿವರಿ ಬಾಯ್ ಕೆಲಸದಲ್ಲಿ ಜೊಮಾಟೊ ಸಿಇಒ; ಲಿಫ್ಟ್ ಬಳಸಲು ಬಿಡದ ಮಾಲ್ ಸೆಕ್ಯೂರಿಟಿ

ರತನ್ ಟಾಟಾ ಅವರ ಆರೋಗ್ಯ ಸ್ಥಿತಿ ಗಂಭೀರವಾದ್ದರಿಂದ ಅವರನ್ನು ಕೂಡಲೇ ಐಸಿಯುಗೆ ದಾಖಲಿಸಲಾಗಿದೆ. ಹೃದ್ರೋಗ ತಜ್ಞ ಡಾ. ಶಾರುಖ್ ಅಸ್ಪಿ ಗೋಲ್​ವಾಲ ಅವರ ಮಾರ್ಗದರ್ಶನದಲ್ಲಿ ಟಾಟಾಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೆಲ ವರದಿಗಳು ಹೇಳಿವೆ. ಈ ಹಿನ್ನೆಲೆಯಲ್ಲಿ ರತನ್ ಟಾಟಾ ತಾವೇ ಖುದ್ದಾಗಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಆರೋಗ್ಯದ ಬಗ್ಗೆ ಅಪ್​ಡೇಟ್ ನೀಡಿದ್ದಾರೆ.

ಇದನ್ನೂ ಓದಿ: ಕಂಪನಿ ಮಾರಿ 400 ನೌಕರರನ್ನು ಶ್ರೀಮಂತರನ್ನಾಗಿಸಿದ ಸಿಇಒ ಜ್ಯೋತಿ ಬನ್ಸಾಲ್

86 ವರ್ಷದ ರತನ್ ಟಾಟಾ ಭಾರತದ ಅತ್ಯಂತ ಹಿರಿಯ ಮತ್ತು ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ಜೆಆರ್​ಡಿ ಟಾಟಾ ಅವರ ಮಗನಾದ ರತನ್ ಟಾಟಾ 1991ರಿಂದ 2012ರವರೆಗೂ ಟಾಟಾ ಗ್ರೂಪ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. 2016-17ರ ಮಧ್ಯೆ ಕೆಲ ತಿಂಗಳ ಕಾಲ ತಾತ್ಕಾಲಿಕವಾಗಿಯೂ ಆ ಹುದ್ದೆಯಲ್ಲಿದ್ದರು. ಇದೀಗ ಎನ್ ಚಂದ್ರಶೇಖರನ್ ಅವರು ಟಾಟಾ ಸನ್ಸ್ ಛೇರ್ಮನ್ ಆಗಿದ್ದಾರೆ. ರತನ್ ಟಾಟಾ ತಮ್ಮ ಸಂಸ್ಥೆಯ ಸಾಮಾಜಿಕ ಸೇವಾ ಕಾರ್ಯಗಳನ್ನು ನೋಡಿಕೊಳ್ಳುತ್ತಿದ್ದಾರೆ


Leave a Comment

Your email address will not be published. Required fields are marked *