ಬ್ರೇಕಪ್​ನಲ್ಲಿ ಕೊನೆಯಾಗಿದ್ದ ಶಾರುಖ್​-ಗೌರಿ ಲವ್​ಸ್ಟೋರಿ; ಮತ್ತೆ ಒಂದಾಗಿದ್ದು ಹೇಗೆ?


ಗೌರಿ ಬಳಿ ಡೇಟ್​ಗೆ ಬರುವಂತೆ ಶಾರುಖ್ ಕೇಳಿಯೇ ಬಿಟ್ಟರು. ಆದರೆ, ಬಾಯ್​ಫ್ರೆಂಡ್ ಇದ್ದಾನೆ ಎಂದು ಹೇಳಿ ಈ ಆಫರ್​ನ ಅವರು ರಿಜೆಕ್ಟ್ ಮಾಡಿದರು. ಆದರೆ, ಗೌರಿಗೆ ಯಾವುದೇ ಬಾಯ್​ಫ್ರೆಂಡ್ ಇಲ್ಲ ಎನ್ನುವ ವಿಚಾರ ನಂತರ ಗೊತ್ತಾಯಿತು. 

ಬ್ರೇಕಪ್​ನಲ್ಲಿ ಕೊನೆಯಾಗಿದ್ದ ಶಾರುಖ್​-ಗೌರಿ ಲವ್​ಸ್ಟೋರಿ; ಮತ್ತೆ ಒಂದಾಗಿದ್ದು ಹೇಗೆ?

ಗೌರಿ-ಶಾರುಖ್

ಗೌರಿ ಖಾನ್ ಅವರಿಗೆ ಇಂದು (ಅಕ್ಟೋಬರ್ 8) ಬರ್ತ್​ಡೇ. ಅವರು ಶಾರುಖ್ ಖಾನ್​ನ ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಅವರ ದಾಂಪತ್ಯಕ್ಕೆ 3 ದಶಕ ಕಳೆದಿದೆ. ಶಾರುಖ್ ಖಾನ್ ಯಶಸ್ಸಿನ ಹಿಂದೆ ಗೌರಿ ಖಾನ್ ಅವರ ಕೊಡಗೆಯೂ ಇದೆ. ಶಾರುಖ್ ಖಾನ್ ಅವರು 90ರ ದಶಕದಲ್ಲಿ ಬೇಡಿಕೆಯ ನಟ ಆಗಿದ್ದರು. ಇಬ್ಬರ ಮಧ್ಯೆ ಸಣ್ಣ ವಯಸ್ಸಿನಲ್ಲೇ ಪ್ರೀತಿ ಆಯಿತು. ಶಾರುಖ್ ಖಾನ್ ಅವರು ತಮ್ಮನ್ನು ನಂಬಿ ಬಂದ ಗೌರಿಯನ್ನು ಎಂದಿಗೂ ಕೈ ಬಿಡಲಿಲ್ಲ.

ಶಾರುಖ್ ಹಾಗೂ ಗೌರಿ ಖಾನ್ ಪ್ರೀತಿ ಮಾಡಿದರು. ನಂತರ ಮದುವೆ ಆದರು. ಇಬ್ಬರಿಗೂ ಮದುವೆ ಆಗಬೇಕು ಎಂಬುದು ಕನಸಾಗಿತ್ತು.  ಶಾರುಖ್ ಖಾನ್​ಗೆ ಆಗಿನ್ನೂ 18 ವರ್ಷ. ಗೌರಿ ಖಾನ್​ಗೆ 14 ವರ್ಷ. ಈ ವೇಳೆ ಇಬ್ಬರ ಭೇಟಿ ನಡೆಯಿತು. ಪಾರ್ಟಿ ಒಂದರಲ್ಲಿ ಈ ಭೇಟಿ ನಡೆದಿತ್ತು. ಶಾರುಖ್ ಖಾನ್ ಅವರು ಗೌರಿಯನ್ನು ನೋಡಿದ್ದು 1984ರಲ್ಲಿ. ಆದರೆ, ನಾಚಿಕೆ ಸ್ವಭಾವದಿಂದ ಶಾರುಖ್​ಗೆ ಗೌರಿ ಬಳಿ ಮಾತನಾಡಲು ಸಾಧ್ಯವಾಗಿಲ್ಲ.

ಗೌರಿ ಬಳಿ ಡೇಟ್​ಗೆ ಬರುವಂತೆ ಶಾರುಖ್ ಕೇಳಿಯೇ ಬಿಟ್ಟರು. ಆದರೆ, ಬಾಯ್​ಫ್ರೆಂಡ್ ಇದ್ದಾನೆ ಎಂದು ಹೇಳಿ ಈ ಆಫರ್​ನ ಅವರು ರಿಜೆಕ್ಟ್ ಮಾಡಿದರು. ಆದರೆ, ಗೌರಿಗೆ ಯಾವುದೇ ಬಾಯ್​ಫ್ರೆಂಡ್ ಇಲ್ಲ ಎನ್ನುವ ವಿಚಾರ ನಂತರ ಗೊತ್ತಾಯಿತು.

ಶಾರುಖ್ ಖಾನ್ ಸಾಕಷ್ಟು ಪಾಸೆಸಿಸವ್ ಆಗಿದ್ದರು. ಗೌರಿ ತಮಗೆ ರಿಲೇಶನ್​ಶಿಪ್​ನಿಂದ ಬ್ರೇಕ್ ಪಡೆಯೋ ನಿರ್ಧಾರಕ್ಕೆ ಬಂದರು. ಅವರಿಂದ ದೂರ ಆಗುವ ಪ್ರಯತ್ನ ಮಾಡಿದರು. ಶಾರುಖ್ ಹಾಗೂ ಗೌರಿ ಆಗ ದೆಹಲಿಯಲ್ಲಿ ಇದ್ದರು. ಶಾರುಖ್​ಗೆ ಹೇಳದೇ ಗೌರಿ ಮುಂಬೈಗೆ ತೆರಳಿದರು. ಆದರೆ, ಒಬ್ಬರು ಬಿಟ್ಟು ಒಬ್ಬರು ಇರೋಕೆ ಸಾಧ್ಯವಿಲ್ಲ ಎಂದು ಗೊತ್ತಾದಾಗ ಇಬ್ಬರೂ ಮತ್ತೆ ಒದಾದರು. ಮದುವೆ ಆಗುವ ನಿರ್ಧಾರ ತೆಗೆದುಕೊಂಡರು.

ಇದನ್ನೂ ಓದಿ: ‘ಪುಷ್ಪ ನಾನು ಮಾಡಬೇಕಿತ್ತು, ಅಲ್ಲು ಅರ್ಜುನ್ ಸರ್ ಗ್ರೇಟ್ ಬಿಡಿ’: ಶಾರುಖ್ ಖಾನ್

ಶಾರುಖ್ ಮುಸ್ಲಿಂ, ಗೌರಿ ಹಿಂದೂ. ಹೀಗಾಗಿ ಕುಟುಂಬದವರು ಮದುವೆಗೆ ಒಪ್ಪಿಗೆ ಕೊಡಲಿಲ್ಲ. ನಂತರ ನಿರಂತರ ಪ್ರಯತ್ನದ ಬಳಿಕ ಈ ಮದುವೆಗೆ ಅನುಮತಿ ಸಿಕ್ಕಿತು. 1991ರ ಅಕ್ಟೋಬರ್ 25ರಂದು ಇವರು ವಿವಾಹ ಆದರು. ಆಗ ಶಾರುಖ್ ಖಾನ್ ಇನ್ನೂ ಸಕ್ಸಸ್ ಕಂಡಿರಲಿಲ್ಲ. ಶಾರುಖ್​ಗೆ ಆಗ 25 ವರ್ಷ, ಗೌರಿಗೆ 21 ವರ್ಷ. ಗೌರಿ ಖಾನ್ ಇಂಟೀರಿಯರ್ ಡಿಸೈನರ್ ಆಗಿದ್ದಾರೆ. ನಂತರ ಮನ್ನತ್ ಮನೆ ಖರೀದಿ ಮಾಡಿದ್ದರು.


Leave a Comment

Your email address will not be published. Required fields are marked *