KSRTC: ತಿಂಗಳಾಂತ್ಯಕ್ಕೆ ರಸ್ತೆಗೆ ಇಳಿಯಲಿವೆ ಐರಾವತ ಕ್ಲಬ್ ಕ್ಲಾಸ್ 2.0 ಬಸ್​ಗಳು


ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಐರಾವತ ಕ್ಲಬ್ ಕ್ಲಾಸ್ 2.0 ನೂತನ ವೋಲ್ವೋ (9600 ಮಾದರಿ)ಯ ಹೊಸ 20 ಬಸ್ಸುಗಳು ಈ ತಿಂಗಳ ಕೊನೆಯ ವಾರದಲ್ಲಿ ನಿಗಮಕ್ಕೆ ಸೇರ್ಪಡೆಗೊಳ್ಳಲಿವೆ. ಒಂದು ಬಸ್ಸಿನ ದರ ರೂ.1.78 ಕೋಟಿ ರೂಪಾಯಿ ಆಗಿದೆ.

KSRTC Set to launch Airavata Club Class 2.0 buses
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ವು ವಿವಿಧ ಮಾದರಿಯ ಅತ್ಯಾಧುನಿಕ ಬಸ್ಸುಗಳನ್ನು ಪ್ರಯಾಣಿಕರ ಬೇಡಿಕೆಗನುಣವಾಗಿ ರಸ್ತೆಗೆ ಇಳಿಸುವುದರಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಕೆಎಸ್​ಆರ್​​ಟಿಸಿ ಬಸ್​ಗಳು ದೇಶದಲ್ಲೇ ಅತ್ಯಂತ ಆಕರ್ಷಣೀಯ ಬಸ್​​ಗಳಾಗಿವೆ.1 / 5
KSRTC Set to launch Airavata Club Class 2.0 buses
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ಕ್ಕೆ ಐರಾವತ ಕ್ಲಬ್ ಕ್ಲಾಸ್ 2.0 ನೂತನ ವೋಲ್ವೋ (9600 ಮಾದರಿ)ಯ ಹೊಸ 20 ಬಸ್ಸುಗಳು ಈ ತಿಂಗಳ ಕೊನೆಯ ವಾರದಲ್ಲಿ ಸೇರ್ಪಡೆಗೊಳ್ಳಲಿವೆ. ಒಂದು ಬಸ್ಸಿನ ದರ ರೂ.1.78 ಕೋಟಿ ರೂಪಾಯಿ ಆಗಿದೆ.2 / 5
KSRTC Set to launch Airavata Club Class 2.0 buses
ಕೆಎಸ್​ಆರ್​ಟಿಸಿ ನಿಗಮದಲ್ಲಿ ಒಟ್ಟು 443 ಐಷಾರಾಮಿ ಬಸ್ಸುಗಳಿದ್ದು, ನೂತನವಾಗಿ ಸೇರ್ಪಡೆಗೊಳ್ಳುತ್ತಿರುವ ಬಸ್​ಗಳು ಹೆಚ್ಚು ವಿಶೇಷತೆ ಹೊಂದಿವೆ. ಈ ಬಸ್ಸಿನಲ್ಲಿ ಶಕ್ತಿಶಾಲಿ ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಡೇ ರನ್ನಿಂಗ್ ಲೈಟ್‌ಗಳೊಂದಿಗೆ (DRL) ಹೊಸ‌ ಪ್ಲಶ್ ಇಂಟೀರಿಯರ್ಸ್ ಮತ್ತು ಬಾಹ್ಯ ಸ್ಕ್ಯಾಂಡಿನೇವಿಯನ್ ವಿನ್ಯಾಸ ಹೊಂದಿದೆ.3 / 5
KSRTC Set to launch Airavata Club Class 2.0 buses
ಏರೋಡೈನಾಮಿಕ್ ವಿನ್ಯಾಸದಿಂದ ಉತ್ತಮ ಇಂಧನ ದಕ್ಷತೆ ಹೊಂದಿದೆ. ಉಳಿದ ಬಸ್​​ಗಳಿಗಿಂತ ಈ ಹೊಸ ಬಸ್ಸಿನ ಉದ್ದ ಶೇ3.5 ರಷ್ಟು ಮತ್ತು ಎತ್ತರದಲ್ಲಿ ಶೇ5.6 ಹೆಚ್ಚಳ ಇರುವುದರಿಂದ ಸೀಟ್​ಗಳ ನಡುವಿನ ಅಂತರ ಮತ್ತು ಹೆಚ್ಚಿನ ಹೆಡ್‌ ರೂಂ ಇರುತ್ತದೆ. ಜೊತೆಗೆ USB+ C ಟೈಪ್ ನಂತಹ ಹೊಸ ಜನರೇಷನ್ ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಉತ್ತಮ ಎಸಿ, ಫೈರ್ ಅಲಾರ್ಮ್, ಮತ್ತು ಪ್ರೊಟೆಕ್ಷನ್ ಸಿಸ್ಟಮ್ ಅಳವಡಿಸಲಾಗಿದೆ.4 / 5
KSRTC Set to launch Airavata Club Class 2.0 buses
ಈ ನೂತನ ಬಸ್​ಗಳನ್ನು ಸಾರಿಗೆ ಸಚಿವ ರಾಮಲಿಂಗರೆಡ್ಡಿ,KSRTC ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ಕೆಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ ಅವರು ಹೊಸಕೋಟೆ ಬಳಿ ಇರುವ ವೋಲ್ವೋ ಬಸ್ ತಯಾರಿಕಾ ಫ್ಯಾಕ್ಟರಿಗೆ ಭೇಟಿ ನೀಡಿ ಪರಿವೀಕ್ಷಿಸಿದರು.

Leave a Comment

Your email address will not be published. Required fields are marked *