ರತನ್ ಟಾಟಾ ನಿಧನಕ್ಕೆ ಷೇರುಪೇಟೆ ರಿಯಾಕ್ಷನ್ ಹೇಗಿತ್ತು? 15 ಷೇರುಗಳಲ್ಲಿ ಎದ್ದಿದ್ದೆಷ್ಟು, ಬಿದ್ದಿದ್ದೆಷ್ಟು?


Tata group stocks performance on Oct 10th: ರತನ್ ಟಾಟಾ ಇಹಲೋಕ ತ್ಯಜಿಸಿದ ಬಳಿಕ ಟಾಟಾ ಗ್ರೂಪ್​ಗೆ ಮುಂದ್ಯಾರು ದಿಕ್ಕು ಎಂದು ಶೋಧಿಸಲಾಗುತ್ತಿದೆ. ಇದೇ ವೇಳೆ ಇವತ್ತು ಷೇರು ಮಾರುಕಟ್ಟೆ ಟಾಟಾ ಗ್ರೂಪ್​ನ ಹೆಚ್ಚಿನ ಕಂಪನಿಗಳ ಷೇರಿಗೆ ಪಾಸಿಟಿವ್ ಸ್ಪಂದನೆ ಸಿಕ್ಕಿದೆ. 9 ಸ್ಟಾಕ್​ಗಳು ಗ್ರೀನ್ ಬಣ್ಣದಲ್ಲಿವೆ.

ರತನ್ ಟಾಟಾ ನಿಧನಕ್ಕೆ ಷೇರುಪೇಟೆ ರಿಯಾಕ್ಷನ್ ಹೇಗಿತ್ತು? 15 ಷೇರುಗಳಲ್ಲಿ ಎದ್ದಿದ್ದೆಷ್ಟು, ಬಿದ್ದಿದ್ದೆಷ್ಟು?

ಷೇರು ಮಾರುಕಟ್ಟೆ

ನವದೆಹಲಿ, ಅಕ್ಟೋಬರ್ 10: ರತನ್ ಟಾಟಾ ನಿಧನದಿಂದ ದೇಶದ ಅಮೂಲ್ಯ ರತ್ನವೊಂದು ಇಹಲೋಕ ತ್ಯಜಿಸಿದಂತಾಗಿದೆ. ಭಾರತದಲ್ಲಿ ಕೈಗಾರಿಕೋದ್ಯಮ ಬೆಳವಣಿಗೆಗೆ ಬುನಾದಿ ಹಾಕಿದವರಲ್ಲಿ ಇವರ ಟಾಟಾ ಕುಟುಂಬವೂ ಒಂದು. ದೇಶದ ಗಣ್ಯರು ಇವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಇದೇ ವೇಳೆ, ಇವತ್ತಿನ ಷೇರು ಮಾರುಕಟ್ಟೆಯು ಟಾಟಾ ಗ್ರೂಪ್ ಕಂಪನಿಗಳಿಗೆ ಪೂರಕವಾಗಿ ಸ್ಪಂದಿಸುವ ಮೂಲಕ ರತನ್ ಟಾಟಾ ಅವರನ್ನು ಸಕಾರಾತ್ಮಕವಾಗಿ ಬೀಳ್ಕೊಟ್ಟಿದೆ. ಟಾಟಾ ಗ್ರೂಪ್​ನ ಕಂಪನಿಗಳ ಪೈಕಿ 15-16 ಕಂಪನಿಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿವೆ. ಈ ಪೈಕಿ ಒಂಬತ್ತು ಕಂಪನಿಗಳು ಪಾಸಿಟಿವ್ ಆಗಿ ಅಂತ್ಯಗೊಂಡಿವೆ. ಆರು ಷೇರುಗಳ ಬೆಲೆ ಮಾತ್ರ ಇವತ್ತು ಇಳಿಮುಖಗೊಂಡಿದೆ.

ಟಾಟಾ ಇನ್ವೆಸ್ಟ್​ಮೆಂಟ್ ಕಾರ್ಪೊರೇಶನ್ ಮತ್ತು ಟಾಟಾ ಕೆಮಿಕಲ್ಸ್ ಸಂಸ್ಥೆಗಳ ಷೇರುಗಳು ಶೇ. 4ಕ್ಕಿಂತಲೂ ಅಧಿಕ ಬೆಲೆ ಹೆಚ್ಚಳ ಪಡೆದಿವೆ. ಕುಸಿತಗೊಂಡ ಆರು ಟಾಟಾ ಷೇರುಗಳಲ್ಲಿ ಟ್ರೆಂಟ್ ಹೆಚ್ಚು ನಷ್ಟ ಕಂಡಿದೆ. ಒಟ್ಟಾರೆ, ಟಾಟಾ ಗ್ರೂಪ್ ಇವತ್ತು ಉತ್ತಮ ಲಾಭ ಕಂಡಿದೆ. ಗ್ರೂಪ್​ನ ಒಟ್ಟಾರೆ ಮಾರುಕಟ್ಟೆ ಬಂಡವಾಳ 30 ಲಕ್ಷ ಕೋಟಿ ರೂಗೂ ಅಧಿಕ ಇದೆ.

ಅ. 10ರ ಷೇರುಮಾರುಕಟ್ಟೆಯಲ್ಲಿ ಲಾಭ ಮಾಡಿದ ಟಾಟಾ ಗ್ರೂಪ್ ಕಂಪನಿಗಳಿವು

  1. ಟಾಟಾ ಸ್ಟೀಲ್ ಲಿ: 159.72 ರೂ (ಶೇ. 0.41ರಷ್ಟು ಏರಿಕೆ)
  2. ಟಾಟಾ ಕೆಮಿಕಲ್ಸ್: 1,151.2 ರೂ (ಶೇ. 4.15ರಷ್ಟು ಏರಿಕೆ)
  3. ಟಾಟಾ ಪವರ್: 465.65 ರೂ (ಶೇ. 1.04ರಷ್ಟು ಏರಿಕೆ)
  4. ಇಂಡಿಯನ್ ಹೋಟೆಲ್ಸ್ ಕಂಪನಿ: 706.25 ರೂ (ಶೇ. 1.82ರಷ್ಟು ಏರಿಕೆ)
  5. ಟಾಟಾ ಕಮ್ಯೂನಿಕೇಶನ್ಸ್: 1951.8 ರೂ (ಶೇ. 0.13ರಷ್ಟು ಏರಿಕೆ)
  6. ಟಾಟಾ ಇನ್ವೆಸ್ಟ್​ಮೆಂಟ್ ಕಾರ್ಪೊರೇಶನ್: 6,923.25 ರೂ (ಶೇ. 5.71ರಷ್ಟು ಏರಿಕೆ)
  7. ಟಾಟಾ ಎಲ್​ಕ್ಸಿ: 7,759.3 ರೂ (ಶೇ. 1.9ರಷ್ಟು ಏರಿಕೆ)
  8. ನೆಲ್ಕೋ ಲಿಮಿಟೆಡ್: 1,006.6 ರೂ (ಶೇ. 1.05ರಷ್ಟು ಏರಿಕೆ)
  9. ಟಾಟಾ ಟೆಕ್ನಾಲಜೀಸ್ ಲಿ: 1,064.7 ರೂ (ಶೇ. 1.53ರಷ್ಟು ಏರಿಕೆ)

ಇದನ್ನೂ ಓದಿ: ಫೋನಿಲ್ಲ, ಸಿಂಪಲ್ ಲೈಫ್.. ರತನ್ ಟಾಟಾ ಸಹೋದರ ಜಿಮ್ಮಿಯದ್ದು ಎಲ್ಲಾ ಇದ್ದೂ ಏನೂ ಇಲ್ಲದಂಥ ಜೀವನ

ಅ. 10ರ ಷೇರುಮಾರುಕಟ್ಟೆಯಲ್ಲಿ ನಷ್ಟ ಕಂಡ ಟಾಟಾ ಗ್ರೂಪ್ ಕಂಪನಿಗಳಿವು

  1. ಟಾಟಾ ಮೋಟಾರ್ಸ್: 928.5 ರೂ (ಶೇ. 1.13ರಷ್ಟು ಇಳಿಕೆ)
  2. ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್): 4,227.4 ರೂ (ಶೇ. 0.6ರಷ್ಟು ಇಳಿಕೆ)
  3. ಟ್ರೆಂಟ್ ಲಿ: 8,028.85 ರೂ (ಶೇ. 2.34ರಷ್ಟು ಇಳಿಕೆ)
  4. ವೋಲ್ಟಾಸ್ ಲಿ: 1,776.7 ರೂ (ಶೇ. 0.55ರಷ್ಟು ಇಳಿಕೆ)
  5. ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್: 1,114.15 ರೂ (ಶೇ. 0.33ರಷ್ಟು ಇಳಿಕೆ)
  6. ಟೈಟಾನ್ ಕಂಪನಿ: 3,447.25 ರೂ (ಶೇ. 1.32ರಷ್ಟು ಇಳಿಕೆ)

Leave a Comment

Your email address will not be published. Required fields are marked *