ಇತ್ತೀಚೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ನಂತರ ಗರ್ಭಿಣಿಯರು ಹಾಗೂ ನವಜಾತ ಶಿಶುಗಳು ಸಾವನ್ನಪ್ಪುತ್ತಿರುವುದನ್ನು ಖಂಡಿಸಿ ಕರ್ನಾಟಕ ಮಹಿಳಾ ಮೋರ್ಚಾ ಬಿಜೆಪಿ ವತಿಯಿಂದ ಮಹಿಳಾ ಮೋರ್ಚಾ ಅಧ್ಯಕ್ಷೆ ಕರ್ನಾಟಕ ಸಿ.ಮಂಜುಳಾ ಮೇಡಂ ನೇತೃತ್ವದಲ್ಲಿ ಜಿಲ್ಲಾವಾರು ಪ್ರತಿಭಟನೆ .
ಬೆಳಗಾವಿ ದಕ್ಷಿಣ, ಉತ್ತರ ಮಹಿಳಾ ಮೋರ್ಚಾ ಹಾಗೂ ಗ್ರಾಮಾಂತರ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಅವರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜ್ಞಾಪನ ಪತ್ರ ನೀಡಲಾಯಿತು.ಡಾ ಸೋನಾಲಿ ಸರ್ನೋಬತ್ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಕರ್ನಾಟಕ,ಬಿಜೆಪಿ ಬೆಳಗಾವಿ ಮಹಾನಗರ ಅಧ್ಯಕ್ಷೆ ಗೀತಾ ಸುತಾರ, ಉತ್ತರ ಮಹಿಳಾ ಮೋರ್ಚಾ ಅಧ್ಯಕ್ಷೆ ಕಲ್ಪನಾ ಇಟಗಿ,ಶಿಲ್ಪಾ ಹಿತಲಗಿರಿ ದಕ್ಷಿಣ ಮಹಿಳಾ ಮೋರ್ಚಾ ಅಧ್ಯಕ್ಷೆ, ಗ್ರಾಮಾಂತರ ಅಧ್ಯಕ್ಷೆ ನೈನಾ ಭಸ್ಮೆ ಹಾಗೂ ಮಹಿಳಾ ಮೋರ್ಚಾ ಸದಸ್ಯರು ಉಪಸ್ಥಿತರಿದ್ದರು.





