ಚಂದನ್ ಶೆಟ್ಟಿ & ನಟಿ ಸುಪ್ರೀತಾ ಮದುವೆ, ಹೊಸ ಬದುಕು ಆರಂಭಿಸಿದ ಜೋಡಿ…


ಕನ್ನಡ ಸಿನಿಮಾ ರಂಗದಲ್ಲಿ ಒಬ್ಬೊಬ್ಬರೇ ಸಿಹಿಸುದ್ದಿ ನೀಡುತ್ತಿದ್ದಾರೆ, ಇತ್ತೀಚಿಗೆ ಮದುವೆ ಆಗಿ ಡಿವೋರ್ಸ್ ಕೂಡ ಪಡೆದಿದ್ದ ದಂಪತಿಗಳು ಅಭಿಮಾನಿಗಳಿಗೆ ಆಘಾತವನ್ನೇ ನೀಡಿದ್ದರು. ಈ ಮೂಲಕ ತಮ್ಮ ನೆಚ್ಚಿನ ನಟ & ನಟಿಯರು ಮದುವೆ ಸಂಬಂಧ ಮುರಿದುಕೊಂಡು ದೂರ ಆಗಿದ್ದ ವಿಚಾರ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತ್ತು. ಹೀಗಿದ್ದಾಗಲೇ, ಚಂದನ್ ಶೆಟ್ಟಿ & ನಟಿ ಸುಪ್ರೀತಾ ಅದ್ಧೂರಿ ಮದುವೆ…

ಚಂದನ್ ಶೆಟ್ಟಿ & ನಟಿ ಸುಪ್ರೀತಾ ಮದುವೆ… ಹೌದು, ಕನ್ನಡ ಸಿನಿಮಾ ರಂಗದಲ್ಲಿ ಬರೀ ಬೇಡದ ಸುದ್ದಿಗಳೇ ಕೆಲವು ದಿನಗಳಿಂದ ಎಲ್ಲರನ್ನೂ ಕಾಡಿ ಭಯ ಹುಟ್ಟಿಸಿದ್ದವು. ಒಂದ್ಕಡೆ ಕನ್ನಡ ಸಿನಿಮಾ ರಂಗದ ನಟ & ನಟಿಯರು ಡಿವೋರ್ಸ್ ಅಂದ್ರೆ ಸಂಸಾರದಿಂದ ಬೇರೆ ಬೇರೆ ಆಗುವ ಸುದ್ದಿ, ಇನ್ನೊಂದು ಕಡೆ ಕೊಲೆ ಆರೋಪ ಹೊತ್ತು ಜೈಲಿಗೂ ಹೋಗಿರುವ ವಿಚಾರ ಕನ್ನಡ ಸಿನಿಮಾ ರಂಗದಲ್ಲಿ ತಲ್ಲಣ ಎಬ್ಬಿಸಿದೆ. ಹೀಗಿದ್ದಾಗಲೇ, ಚಂದನ್ ಶೆಟ್ಟಿ & ನಟಿ ಸುಪ್ರೀತಾ ಮದುವೆ, ಹೊಸ ಬದುಕು ಆರಂಭಿಸಿದ ಜೋಡಿ… ಅಷ್ಟಕ್ಕೂ, ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಸೀತಾ ವಲ್ಲಭ ಧಾರಾವಾಹಿಯ ಮೂಲಕ ದೊಡ್ಡ ಹೆಸರು ಮಾಡಿದ್ದರು. ಮೈಥಲಿ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸು ಗೆದ್ದು, ಕನ್ನಡ ವೀಕ್ಷಕರಿಗೆ ಹತ್ತಿರವಾಗಿದ್ದರು. ಅಲ್ಲದೇ ಗಿರೀಶ್ ವೈರಮುಡಿ ನಿರ್ದೇಶನದ ರಹದಾರಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್ ಅಂದ್ರೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳ್ಳಿ ತೆರೆಗೆ ಕೂಡ ಎಂಟ್ರಿ ಕೊಟ್ಟಿದ್ದರು ನಟಿ ಸುಪ್ರೀತಾ ಸತ್ಯನಾರಾಯಣ್ ಅವರು. ಹೀಗಿದ್ದಾಗಲೇ, ಚಂದನ್ ಶೆಟ್ಟಿ ಜೊತೆ ಹೊಸ ಬದುಕು ಆರಂಭಿಸಿದ್ದಾರೆ ನಟಿ ಸುಪ್ರೀತಾ ಸತ್ಯನಾರಾಯಣ್ ಅವರು!

ಮಾರ್ಚ್‌ ತಿಂಗಳಲ್ಲೇ ನಟಿ ಸುಪ್ರೀತಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ರು, ಚಂದನ್ ಶೆಟ್ಟಿ ಎಂಬುವವರ ಜೊತೆ ಈಗ ನಟಿ ಸುಪ್ರೀತಾ ಅವರು ಮದುವೆ ಆಗಿದ್ದಾರೆ. ಈ ಬಗ್ಗೆ ನಟಿ ಸುಪ್ರೀತಾ ಅವರು ಖುಷಿ ಹಂಚಿಕೊಂಡಿದ್ದರು. ನಟಿ ಸುಪ್ರೀತಾ ಸತ್ಯನಾರಾಯಣ್ ಈಗ ಮದುವೆ ಆಗಿರುವ ಚಂದನ್ ಶೆಟ್ಟಿ ಯಾರು ಎಂಬುದನ್ನು ನೋಡುವುದಾದರೆ, ಡಿಜಿಟಲ್ ಕ್ರಿಯೇಟರ್ ಅಂತಾ ನಟಿ ಸುಪ್ರೀತಾ ಅವರ ಪತಿ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಾಕಿದ್ದಾರೆ. ಈ ಮೂಲಕ ನಟಿ ಸುಪ್ರೀತಾ ಸತ್ಯನಾರಾಯಣ್ ಅವರು ಚಂದನ್ ಶೆಟ್ಟಿ ಎಂಬುವವರ ಜೊತೆಗೆ ಹೊಸ ಬದುಕನ್ನು ಆರಂಭ ಮಾಡಿದ್ದಾರೆ.


Leave a Comment

Your email address will not be published. Required fields are marked *