ಆಸ್ತಿದಾರರು, ರೈತರಿಗೆ ಭರ್ಜರಿ ಗುಡ್‌ನ್ಯೂಸ್‌: ಮನೆ ಬಾಗಿಲಿಗೆ ಬರಲಿದೆ ಇ – ಪೌತಿ ಖಾತಾ!


ಕರ್ನಾಟಕ ಸರ್ಕಾರವು ಆಸ್ತಿದಾರರಿಗೆ ಹಾಗೂ ಅದರಲ್ಲೂ ಗ್ರಾಮೀಣ ಭಾಗದ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್‌ವೊಂದನ್ನು ನೀಡಿದೆ. ಇಲ್ಲಿಯ ವರೆಗೆ ಎ ಖಾತಾ, ಬಿ ಖಾತಾ ಹಾಗೂ ಇ ಖಾತಾ ವಿಚಾರದಲ್ಲಿ ಗುಡ್‌ನ್ಯೂಸ್‌ ನೀಡಿದ್ದ ರಾಜ್ಯ ಸರ್ಕಾರವು ಇದೀಗ ಇ ಪೌತಿ ಖಾತಾ ವಿಚಾರದಲ್ಲೂ ಭರ್ಜರಿ ಗುಡ್‌ನ್ಯೂಸ್‌ ನೀಡುವುದಕ್ಕೆ ಮುಂದಾಗಿದೆ. ಇದರಿಂದ ಕರ್ನಾಟಕದ ಸಾವಿರಾರು ಜನ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಹಾಗಾದರೆ ಸರ್ಕಾರವು ರೈತರು ಹಾಗೂ ಆಸ್ತಿದಾರರಿಗೆ ನೀಡಿರುವ ಗುಡ್‌ನ್ಯೂಸ್‌ ಏನು, ಇ ಪೌತಿ ಖಾತಾ ಎಂದರೇನು. ಇ ಪೌತಿ ಖಾತೆ ಹೇಗೆಲ್ಲಾ ಅನುಕೂಲವಾಗಲಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಕರ್ನಾಟಕದ ರೈತರಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಭರ್ಜರಿ ಗುಡ್‌ನ್ಯೂಸ್‌ ನೀಡಿದೆ. ರೈತರು ಸಾವನ್ನಪ್ಪಿದ ನಂತರವೂ ಸರ್ಕಾರಿ ದಾಖಲೆಗಳಲ್ಲಿ ಜೀವಂತವಾಗಿರುವುದನ್ನು ತೋರಿಸುವ ಭೂ ಪಹಣಿ ವಿವರಗಳ ಗೊಂದಲ ಸರಿಪಡಿಸುವುದಕ್ಕೆ ಸರ್ಕಾರವು ಮುಂದಾಗಿದೆ. ಕಂದಾಯ ಇಲಾಖೆಯು ಇ-ಪೌತಿ ಆಂದೋಲನವನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳಲಿದೆ ಎಂದು ಹೇಳಿದೆ

ಮನೆ ಮನೆಗೆ ತೆರಳಿ ಖಾತೆ: ಇನ್ನು ಕಂದಾಯ ಇಲಾಖೆಯು ಈ ಬಾರಿ ಪೌತಿ ಆಂದೋಲನವನ್ನು ನಿಖರವಾಗಿ ಜಾರಿ ಮಾಡುವ ಉದ್ದೇಶ ಇದಾಗಿದೆ. ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರಿಗೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಲಾಗಿದೆ. ಮನೆ.. ಮನೆಗೆ ತೆರಳಿ

*ವಾರಸುದಾರರ ಮಾಹಿತಿ ಸಂಗ್ರಹಿಸಲಾಗುತ್ತದೆ. * ವಂಶವೃಕ್ಷದ ಆಧಾರದ ಮೇಲೆ ವಾರಸುದಾರರನ್ನು ಪತ್ತೆ ಮಾಡಲಾಗುತ್ತದೆ. * ಆಧಾರ್ ಸಂಖ್ಯೆ ಮೂಲಕ OTP ಪಡೆದು ಖಾತೆ ದಾಖಲಿಸಲಾಗುತ್ತದೆ. * ಅಲ್ಲದೇ ವಿವಾದಿತ ಆಸ್ತಿಗಳಲ್ಲಿ ಜಂಟಿ ಖಾತೆ ಅಥವಾ ನ್ಯಾಯಾಲಯದ ಮಾರ್ಗ ಅನುಸರಿಸುವ ವ್ಯವಸ್ಥೆ ಸಹ ಮಾಡಲಾಗುತ್ತದೆ.


Leave a Comment

Your email address will not be published. Required fields are marked *