ಆರ್‌ಸಿಬಿ-ಕೆಕೆಆರ್ ಪಂದ್ಯ ಮಳೆಯಿಂದ ರದ್ದು: ಟಿಕೆಟ್ ಖರೀದಿಸಿದವರಿಗೆ ಹಣ ಮರುಪಾವತಿ ಘೋಷಿಸಿದ ಫ್ರಾಂಚೈಸಿ


ಬೆಂಗಳೂರು: ವಾರದ ಬಳಿಕ ಪುನರಾರಂಭವಾಗಿದ್ದ ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ್ತಾ ನೈಟರ್ ರೈಡರ್ಸ್ ನಡುವಿನ ಪಂದ್ಯದ ಟಿಕೆಟ್ ಖರೀದಿಸಿದ್ದ ಅಭಿಮಾನಿಗಳಿಗೆ ಆರ್‌ಸಿಬಿ ಫ್ರಾಂಚೈಸಿ ಗುಡ್ ನ್ಯೂಸ್ ನೀಡಿದೆ. ವರುಣನ ಅವಕೃಪೆಯಿಂದ ಟಾಸ್ ಪ್ರಕ್ರಿಯೆ ನಡೆಸಲು ಸಹ ಸಾಧ್ಯವಾಗದೆ ರದ್ದಾಗಿದ್ದ ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯದ ಟಿಕೆಟ್ ಹಣವನ್ನು ವಾಪಸ್ ಪಾವತಿಸುವುದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾಹಿತಿ ನೀಡಿದೆ. ಮಳೆಯಿಂದ ಪಂದ್ಯ ರದ್ದಾದ ಬಳಿಕ ನಿರಾಸೆಗೊಂಡಿದ್ದ ಅಭಿಮಾನಿಗಳು ತಮ್ಮ ಟಿಕೆಟ್ ಹಣವನ್ನ ಕ್ಲೈಮ್ ಮಾಡಲು ಅವಕಾಶ ನೀಡಲಾಗಿದೆ.

ಟಿಕೆಟ್ ಹಣ ಹಿಂಪಡೆಯುವುದು ಹೇಗೆ?: ಮ್ಯಾನ್ಯುಯಲ್ ಟಿಕೆಟ್ ಖರೀದಿಸಿದ್ದವರು ತಮ್ಮ ಟಿಕೆಟ್‌ಗಳನ್ನು ಅಧಿಕೃತ ಮಾರಾಟಗಾರರಿಗೆ ಹಿಂದಿರುಗಿಸಿ ಹಣ ಪಡೆದುಕೊಳ್ಳಲು ಸೂಚಿಸಲಾಗಿದೆ. ಡಿಜಿಟಲ್ ಟಿಕೆಟ್ ಖರೀದಿಸಿದ್ದವರಿಗೆ ತಾವು ಹಣ ಪಾವತಿಸಲು ಬಳಸಿದ್ದ ಬ್ಯಾಂಕ್ ಖಾತೆಗೆ ಮುಂದಿನ 10 ದಿನಗಳಲ್ಲಿ ಹಣ ಸಂದಾಯವಾಗಲಿದೆ. ಅಕಸ್ಮಾತ್, ಮೇ.31 ರೊಳಗೆ ಹಣ ಸಂದಾಯವಾಗದಿದ್ದರೆ, ನಿಮ್ಮ ಟಿಕೆಟ್ ಬುಕ್ಕಿಂಗ್ ಮಾಹಿತಿಯನ್ನು refund@ticketgenie.inಗೆ ಮೇಲ್ ಮಾಡಬಹುದಾಗಿದೆ. ಆದರೆ ಕಾಂಪ್ಲಿಮೆಂಟರಿ ಟಿಕೆಟ್‌ಗಳಿಗೆ ಮರುಪಾವತಿ ಇಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಪಷ್ಟಪಡಿಸಿದೆ.ಭಾರತ – ಪಾಕ್ ನಡುವೆ ಸಂಘರ್ಷವುಂಟಾದ ಬಳಿಕ ಐಪಿಎಲ್ ಟೂರ್ನಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು‌. ಒಂದು ವಾರದ ಬಳಿಕ ಪುನರಾರಂಭಗೊಂಡ ಟೂರ್ನಿಯಲ್ಲಿ ಮೇ17 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಕೆಕೆಆರ್ ತಂಡಗಳ ಮುಖಾಮುಖಿ ನಿಗದಿಯಾಗಿತ್ತು. ಆದರೆ ಮಳೆಯಿಂದಾಗಿ ಪಂದ್ಯ ರದ್ದುಗೊಂಡಿತ್ತು. ವೈಟ್ ಜರ್ಸಿ ಧರಿಸುವ ಮೂಲಕ ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿಗೆ ವಿಶೇಷ ಗೌರವ ಸಲ್ಲಿಸಲು ಸಜ್ಜಾಗಿದ್ದ ನೂರಾರು ಆರ್‌ಸಿಬಿ ಅಭಿಮಾನಿಗಳು ಪಂದ್ಯ ರದ್ದಾಗಿದ್ದರಿಂದ ನಿರಾಸೆಗೊಂಡಿದ್ದರು


Leave a Comment

Your email address will not be published. Required fields are marked *