ಎಂಟು ತಿಂಗಳ ತುಂಬು ಗರ್ಭಿಣಿ ಮಲಗಿದ್ದಲ್ಲೇ ಬೀದಿ ಹೆಣವಾಗಿದ್ದಾರೆ.


ಚಿಕ್ಕಬಳ್ಳಾಪುರ : ಎಂಟು ತಿಂಗಳ ತುಂಬು ಗರ್ಭಿಣಿಯೊಬ್ಬರು ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ ಬಳಿ ಮಲಗಿದ್ದಲ್ಲೇ ಬೀದಿ ಹೆಣವಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ ಬಳಿ ಶವ ಸಿಕ್ಕಿದೆ. ಮೃತ ಮಹಿಳೆ ಜಂಗಮಕೋಟೆ ಮೂಲದ ರೇಣುಕಾ (30) ಎಂದು ತಿಳಿದುಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ಪಿಎಸ್ಐ ವೇಣುಗೋಪಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಮ್ಮ ಕರ್ತವ್ಯದ ಜೊತೆಗೆ ಧೈರ್ಯ ಮಾಡಿ ಶವ ಸಂಸ್ಕಾರಕ್ಕೆ ಆರ್ಥಿಕವಾಗಿ ಸಹಾಯ ಮಾಡಿ, ಶವ ಸಂಸ್ಕಾರಕ್ಕೆ ಮುಂದಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಪಿಎಸ್ಐ ವೇಣುಗೋಪಾಲ್ ಮಾನವೀಯತೆ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸಿಸಿದ್ದಾರೆ.


Leave a Comment

Your email address will not be published. Required fields are marked *