ಅಕ್ಷತಾ ಶಂಬಾಜಿ ದೊಡ್ಡಗೌಡ ವಿಶ್ವವಿದ್ಯಾಲಯ ಮಟ್ಟದಲ್ಲಿ 4ನೇ ರ್ಯಾಂಕ್ ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.


ಕರ್ನಾಟಕ ವಿಶ್ವವಿದ್ಯಾಲಯವು ಜುಲೈ/ಆಗಸ್ಟ್ 2024ರಲ್ಲಿ ನಡೆಸಿದ ಬಿ.ಎಸ್ಸಿ ಅಂತಿಮ ಪರೀಕ್ಷೆಯಲ್ಲಿ ಹಳಿಯಾಳ ಪಟ್ಟಣದ ಹವಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿನಿ ಕು.ಅಕ್ಷತಾ ಶಂಬಾಜಿ ದೊಡ್ಡಗೌಡ ಅವರು ಶೇ.93.40 ಅಂಕಗಳನ್ನು ಗಳಿಸಿ, ವಿಶ್ವವಿದ್ಯಾಲಯ ಮಟ್ಟದಲ್ಲಿ 4ನೇ ರ್ಯಾಂಕ್ ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಕಾಳಗಿನಕೊಪ್ಪ ಗ್ರಾಮದ ಈ ಪ್ರತಿಭಾವಂತ ವಿದ್ಯಾರ್ಥಿನಿಯ ಶೈಕ್ಷಣಿಕ ಪರಿಶ್ರಮ,ತಾಳ್ಮೆ ಮತ್ತು ಬದ್ಧತೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿರುವ ಈ ಸಾಧನೆ,ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಶ್ರಮ ಮತ್ತು ನಂಬಿಕೆಯ ಮೂಲಕ ಅತ್ಯುತ್ತಮ ಸಾಧನೆ ಮಾಡಬಹುದೆಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.

ವರದಿ K B A ನ್ಯೂಸ್ ವರದಿಗಾರರು
ರಮೇಶ್ ವಿ ಯದುನಿ

ಇವರ ಈ ಅಮೋಘ ಸಾಧನೆಗೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಹಿರಿಯ ಶಾಸಕರಾದ ಶ್ರೀ ಆರ್. ವಿ. ದೇಶಪಾಂಡೆ ಅವರು ತಮ್ಮ ಸ್ವಗೃಹದಲ್ಲಿ ಕು.ಅಕ್ಷತಾ ದೊಡ್ಡಗೌಡ ಇವರನ್ನು ಆತ್ಮೀಯವಾಗಿ ಅಭಿನಂದಿಸಿ,ಮುಂದಿನ ಉನ್ನತ ಶಿಕ್ಷಣದಲ್ಲಿ ಯಶಸ್ಸು ಕಾಣಲೆಂದು ಶುಭ ಹಾರೈಸಿದರು.


Leave a Comment

Your email address will not be published. Required fields are marked *