“ದೇವರು ವರ ಕೊಟ್ಟರು, ಪೂಜಾರಿ ಕೊಡಲಿಲ್ಲ” ಅನ್ನೋ ಗಾದೆ ನಿಮಗೆ ಕೇಳಿರಬಹುದು. ಹೀಗೇ ಒಂದು ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕ, ಹಂಪಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.ಆಗಸ್ಟ್ 14ರಂದು ರಾತ್ರಿ 8 ಗಂಟೆಗೆ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೊಬೈಲ್ ಕ್ಯಾಂಟೀನ್ ಉದ್ಘಾಟನೆ ನಡೆಯಿತು. ಆದರೆ, ಒಂದು ತಿಂಗಳಾದರೂ ಈ ಯೋಜನೆಯ ಲಾಭ ಪಲಾನುಭವಿಗಳಿಗೆ ತಲುಪಿಲ್ಲ.ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರಿಗೆ ನೀಡಬೇಕಿದ್ದ ಹಕ್ಕನ್ನು ಇನ್ನೂ ನೀಡದೆ ಅಧಿಕಾರಿಗಳು ಅಲಕ್ಷ್ಯ ತೋರಿದ್ದಾರೆ.ಸದಸ್ಯರು ವಿಜಯನಗರ ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವಿಚಾರಿಸಿದಾಗ, ಅವರು ಅಧಿಕಾರದ ದರ್ಪದಿಂದ “ನಿಮಗೆ ಕೊಡುವುದಿಲ್ಲ, ಏನು ಮಾಡ್ತೀರೋ ಮಾಡಿ” ಎಂದು ಹೇಳಿದ್ರಂತೆ! ಅಲ್ಲದೆ “ಜಾಸ್ತಿ ಮಾತನಾಡಿದ್ರೆ ಎಪ್ಪಯರ್ ಮಾಡ್ತೀವಿ” ಅಂತ ಬೆದರಿಕೆ ಹಾಕಿದ್ರು ಎಂದು ಸದಸ್ಯರ ಆರೋಪ ಸರ್ಕಾರದಿಂದ ಜನರಿಗೆ ನೀಡಿದ ಯೋಜನೆ, ಪಲಾನುಭವಿಗಳು ಕೇಳೋದ್ರಲ್ಲಿ ತಪ್ಪೇನು?
ಅಭಿವೃದ್ಧಿ ಮಾಡಬೇಕು, ಜನರ ಪರ ಕೆಲಸ ಮಾಡಬೇಕು ಅಂತ ಅಧಿಕಾರಿಗಳನ್ನು ನೇಮಿಸಿದ್ರೆ, ಕೇಸ್ ಹಾಕ್ತೀನಿ ಅಂತ ಬೆದರಿಕೆ ಹಾಕೋಕೆನಾ ಅಧಿಕಾರ?ಸ್ತ್ರೀ ಶಕ್ತಿ ಸಂಘದ ಸದಸ್ಯರ ಮಾತು ಪ್ರಕಾರ, ಇದು ಅಧಿಕಾರಿಗಳ ದರ್ಪ, ಕರ್ತವ್ಯ ನಿರ್ಲಕ್ಷ್ಯ.ಇದೀಗ ಜಿಲ್ಲೆಯ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಗಮನ ಹರಿಸಿ, ಸರಕಾರ ನೀಡಿರುವ ಸೌಲಭ್ಯವನ್ನು ಪಲಾನುಭವಿಗಳಿಗೆ ತಲುಪಿಸುವುದು ಅವರ ಕರ್ತವ್ಯ ಎಂಬ ಬೇಡಿಕೆ ಕೇಳಿಬರುತ್ತಿದೆ.ನಿಮ್ಮ ಅಭಿಪ್ರಾಯ ಏನು?
ಅಧಿಕಾರಿಗಳು ಜನರ ಪರ ಕಾರ್ಯ ನಿರ್ವಹಿಸಬೇಕೋ,ಅಥವಾ ಅಧಿಕಾರದ ದರ್ಪ ತೋರಿಸಬೇಕೋ?
ವರದಿ : ಎಮ್. ಶಿಶುನಾಳ ಷರೀಫ್ ಕನಕ ಟಿವಿ ವಿಜಯ ನಗರ.





