ಯಶಸ್ವಿಯಾಗಿ ನಡೆದ ಪೊಲೀಸ್ ಸ್ನೇಹ ಕೂಟ ಕಾರ್ಯಕ್ರಮ.


ಬೆಳಗಾವಿ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ದಿ ಸಂಸ್ಥೆಯ ವತಿಯಿಂದ ಬೆಳಗಾವಿ ನಗರದ ಎಲ್ಲಾ ಪೊಲೀಸ ಹಾಗೂ ಅವರ ಕುಟುಂಬದವರಿಗೆ ಪೊಲೀಸ್ ಸ್ನೇಹ ಕೂಟ ಕಾರ್ಯಕ್ರಮವನ್ನು ಆಯೋಜಿಸಿದರು. ಈ ಕಾರ್ಯಕ್ರಮದಲ್ಲಿ ಬೆಳಗಾವಿ ನಗರದ ಎಲ್ಲಾ ಪೊಲೀಸರು ಮತ್ತು ಕುಟುಂಬ ಸಮೇತರಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಖುಷಿಯನ್ನು ವ್ಯಕ್ತಪಡಿಸುತ್ತಾ ಎಲ್ಲಾ ಪೊಲೀಸರು ಹಾಗೂ ಅವರ ಕುಟುಂಬದವರು ಅವರು ಮಕ್ಕಳುಗಳು ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಸ್ನೇಹಕ್ಕೂಟದಲ್ಲಿ ಆಯೋಜಿಸಲಾಗಿರತಕ್ಕಂತ ಎಲ್ಲಾ ರೀತಿಯ ಆಟಗಳನ್ನು ಆಡಿಸುತ್ತಾ. ಆದರ್ಶ ದಂಪತಿ ಕಾರ್ಯಕ್ರಮಗಳನ್ನು ನಡೆಸುತ್ತಾ. ಪ್ರಶ್ನೋತ್ತರ ಪರೀಕ್ಷೆಗಳನ್ನು ನಡೆಸುತ್ತಾ. ಬೆಳಗಾವಿ ಜಿಲ್ಲೆಯ ಪೊಲೀಸರ ಕುಟುಂಬ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಹರ್ಷವನ್ನು ವ್ಯಕ್ತಪಡಿಸುತ್ತಾ ಇದ್ದರು. ಇದೇ ಸಂದರ್ಭದಲ್ಲಿ ರಾಜ್ಯ ಅಧ್ಯಕ್ಷರಾದ ಡಾಕ್ಟರ್ ಬಿ ಎಚ್ ಜಮಾದರವರು. ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ಯುಗ ಘಟಕ ಸಂಚಾಲರಾಗಿರತಕ್ಕಂತಹ ಅನಿಲ್ ಕುಮಾರ್ ಹವಳೇರವರು ಮಾತನಾಡಿ. ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ದಯೋದ್ದೇಶಗಳನ್ನು ತಿಳಿಸಿದರು ಅದೇ ರೀತಿಯಲ್ಲಿ ಸಂಸ್ಥಾಪಕರು ಹಾಗೂ ರಾಜ್ಯ ಅಧ್ಯಕ್ಷರಾಗಿರ್ತಕ್ಕಂತ ಡಾಕ್ಟರ್ ಬಿ ಎಚ್ ಜಮಾದರವರ ಬೆಳೆದು ಬಂದ ಹಾದಿ ಮತ್ತು ಅವರ ಪರಿಚಯವನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಸಂಗೀತಗಾರರು ಕೂಡ ಹಲವಾರು ಹಾಡುಗಳನ್ನು ಹಾಡುತ್ತಾ ಪೊಲೀಸರಿಗೆ ಹಾಗೂ ಪೊಲೀಸ್ ಕುಟುಂಬಗಳಿಗೆ ಮನರಂಜನೆ ನೀಡಿದರು. ಇದೇ ಸಂದರ್ಭದಲ್ಲಿ ಪೊಲೀಸರು ಕೂಡ ಅವರ ಜೊತೆ ಹಾಡುಗಳನ್ನು ಹೇಳುತ್ತಾ ಕುಣಿದು ಕುಪ್ಪಳಿಸಿದರು. ಕೊನೆಯದಾಗಿ ಎಲ್ಲಾ ಆಟಗಳಲ್ಲಿ ಆಡಿದವರಿಗೆ ಹಾಗೂ ಆದರ್ಶ ದಂಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸಂಸ್ಥೆಯ ಪರವಾಗಿ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಪ್ರಖ್ಯಾತಿ ಹೊಂದಿದ ಸ್ಪರ್ಶ ಫ್ಯಾಸೆನ್ಸ್ ಅವರ ವತಿಯಿಂದ ಆದರ್ಶ ದಂಪತಿಗಳಲ್ಲಿ ಗೆದ್ದವರಿಗೆ ಇಳಕಲ್ ಸೀರೆಗಳನ್ನು ಉಡುಗೊರೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಪೊಲೀಸ್ ಕಲ್ಯಾಣ ಅಭಿವೃದ್ಧಿ ಸಂಸ್ಥೆಯ ರಾಜ್ಯದ ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಈ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡಂತಹ. ರೇಣುಕಾ ಹೊಸೂರ್, ಸೀಮಾ ಪವರ್, ಮಿನಾಜ್ ಬಂಡಿ, ನಿಸರ್ಗ ಮೋರೆ, ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.


Leave a Comment

Your email address will not be published. Required fields are marked *