39 ನಿಮಿಷ 24 ಸೆಕೆಂಡ್‌ಗಳಲ್ಲಿ ಕ್ರಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರ್ಪಡೆಯಾದ ಹುಬ್ಬಳ್ಳಿಯ ಬಾಲಕ


ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಬಾಲಕ ಸುಶ್ವಿನ್ ಅವರು 39 ನಿಮಿಷ 24 ಸೆಕೆಂಡ್‌ಗಳಲ್ಲಿ 11.18 ಕಿ.ಮೀ ಕ್ರಮಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ ಸೇರ್ಪಡೆಯಾಗಿದ್ದಾರೆ. ಇವರಿಗೆ ಈಗ 4 ವರ್ಷ 8 ತಿಂಗಳು ವಯಸ್ಸು. ಸುಶ್ವಿನ್ ಹಳೇಹುಬ್ಬಳ್ಳಿಯ ಇಂದ್ರಪ್ರಸ್ತ ನಗರದ ವಿನಾಯಕ ಮತ್ತು ಸುಷ್ಮಾ ಹಳಪೇಟಿ ದಂಪತಿಯ ಪುತ್ರ

ಏ.5ರಂದು ಈ ಬಾಲಕ ಸತ್ತೂರು ಆಶ್ರಯ ಕಾಲೊನಿಯಿಂದ ಬೆಳಗ್ಗೆ 6.40ಕ್ಕೆ ಆರಂಭಿಸಿ 7.19ಕ್ಕೆ ಉಣಕಲ್‌ ಕ್ರಾಸ್‌ವರೆಗೆ ಸೈಕಲ್ ಓಡಿಸಿ ಈ ದಾಖಲೆ ಮಾಡಿದ್ದಾರೆ.

ಕಳೆದ ಆರು ತಿಂಗಳಿಂದ ಪ್ರತಿನಿತ್ಯ ಬೆಳಗ್ಗೆ ಅಭ್ಯಾಸ ಮಾಡುತ್ತಿದ್ದರು. ಮೊದಲಿಗೆ ರಿಂಗ್ ರಸ್ತೆಯಲ್ಲಿ ತರಬೇತಿ ಆರಂಭಿಸಿದ್ದು, ಸರಿ ಹೋಗಲಿಲ್ಲ. ಹೀಗಾಗಿ, ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಮೊದಮೊದಲು ಸೈಕಲ್ ತುಳಿಯುತ್ತಾ ದೂರ ಕ್ರಮಿಸಲಾಗದೆ ಪರದಾಡುತ್ತಿದ್ದರು. ಕೆಲವು ಸಾರಿ ಅಳುತ್ತಲೇ ಸೈಕ್ಲಿಂಗ್ ಮಾಡುತ್ತಿದ್ದರು. ದಿನ ಕಳೆದಂತೆ ಸೈಕ್ಲಿಂಗ್‌ಗೆ ಹೊಂದಿಕೊಂಡು ಸಾಧನೆ ಮಾಡಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.

ತಮಿಳುನಾಡು ಬಾಲಕನ ದಾಖಲೆ ಮುರಿದ ಸುಶ್ವಿನ್: ತಮಿಳುನಾಡಿನ ಕಲ್ಲಾಕುರಚಿಯ ಆಧವ್ ಅಶೋಕ್ ಕುಮಾರ ಎಂಬ ಬಾಲಕ 10.3 ಕಿ.ಮೀ ದೂರವನ್ನು 39.44 ಸೆಕೆಂಡ್‌ಗಳಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದ್ದರು. ಏ.5, 2023ರಂದು ಕಲ್ಲಾಕುರಚಿಯ ಎನ್‌ಎಚ್ 19ರ ಬೈಪಾಸ್ ಸೇತುವೆ ಬಳಿ ಬೆಳಗ್ಗೆ 6.41ಕ್ಕೆ ಸೈಕ್ಲಿಂಗ್ ಆರಂಭಿಸಿ 7.20ಕ್ಕೆ 10.3 ಕಿಮೀ ಕ್ರಮಿಸಿದ್ದರು. ಈ ಸಾಧನೆ ಮಾಡಿದಾಗ ಅವರಿಗೆ ಏ.10, 2023ಕ್ಕೆ 5 ವರ್ಷ 3 ತಿಂಗಳು 11 ದಿನ ವಯಸ್ಸಾಗಿತ್ತು. ಆದರೆ ಇದೀಗ ಸುಶ್ವಿನ್ 4 ವರ್ಷ 8 ತಿಂಗಳು 24 ದಿನಕ್ಕೆ ಈ ದಾಖಲೆ ಬರೆದು ತಮಿಳುನಾಡಿನ ಬಾಲಕನ ದಾಖಲೆ ಮೀರಿಸಿದ್ದಾರೆ.


Leave a Comment

Your email address will not be published. Required fields are marked *